Chikkaballapur : ಚಿಕ್ಕಬಳ್ಳಾಪುರ ನಗರಸಭೆಯ (CMC Budget) 2025–26ನೇ ಸಾಲಿನ ಬಜೆಟ್ ತಯಾರಿ ಕುರಿತು ನಗರಸಭೆಯಲ್ಲಿ ಗುರುವಾರ ಪೂರ್ವಭಾವಿ ಸಭೆ (Preliminary Meeting) ನಡೆಸಲಾಯಿತು.
ಸಭೆಯಲ್ಲಿ ನಗರದ ಎಲ್ಲ ವಾರ್ಡ್ಗಳಿಗೆ ಅಮೃತ ಯೋಜನೆ, ಪ್ರತಿ ತಿಂಗಳು ನೀರಿನ ಕಂದಾಯ ವಸೂಲಿ, ಯುಜಿಡಿ ಸಮಸ್ಯೆ, ನಗರಸಭೆ ಬೀದಿ ಬದಿ ವ್ಯಾಪಾರಿಗಳ ಸುಂಕ ಹೆಚ್ಚಳ, ಎಂ.ಜಿ ರಸ್ತೆ ವಿಸ್ತರಣೆ ಕಾಮಗಾರಿಗೆ ವೇಗ, ಸರ್ಕಾರಿ ಆಸ್ತಿಗಳ ರಕ್ಷಣೆ, ಕಸವಿಲೇವಾರಿ ಘಟಕದ ಬಗ್ಗೆ ಚರ್ಚೆಗಳು ನಡೆದವು. ಕಳೆದ ವರ್ಷದ ಬಜೆಟ್ನಲ್ಲಿ ನಗರಸಭೆಗೆ ಸರ್ಕಾರದ ಅನುದಾನ ಬಂದಿಲ್ಲ. ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಿದ್ದು ಅನುದಾನ ದೊರಕಿಸಿಕೊಡುವಂತೆ ಶಾಸಕ ಮತ್ತು ಸಂಸದರಿಗೆ ಮನವಿ ಮಾಡಲು ಸದಸ್ಯರು ಒಮ್ಮತದಿಂದ ತೀರ್ಮಾನಿಸಿದರು.
31 ಮಂದಿ ನಗರಸಭೆ ಸದಸ್ಯರ ಪೈಕಿ ಇಬ್ಬರು ಸದಸ್ಯೆಯರು ಸೇರಿದಂತೆ 14 ಮಂದಿ ಮಾತ್ರ ಸಭೆಯಲ್ಲಿ ಹಾಜರಿದ್ದರು.
For Daily Updates WhatsApp ‘HI’ to 7406303366
The post ನಗರಸಭೆ ಬಜೆಟ್ ತಯಾರಿ ಪೂರ್ವಭಾವಿ ಸಭೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.