ಇದು ನಿಮ್ಮ ಆಧುನಿಕ ದಿನಚರ್ಯೆಗೆ ಹೊಸ ಅನುಕೂಲ! ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಅಗತ್ಯವಿಲ್ಲ. ಇನ್ಮುಂದೆ, ನಿಮ್ಮ ಎಲ್ಲಾ ಬಿಲ್‍ಗಳನ್ನು ವಾಟ್ಸಾಪ್ (WhatsApp) ಮೂಲಕವೇ ಪಾವತಿಸಬಹುದು.
WhatsApp ತಂತ್ರಜ್ಞಾನದಲ್ಲಿ ಹೊಸ ಹಂತಕ್ಕೆ ಎಟ್ಟಿದೆ. ಇದರ ಮೂಲಕ ಈಗ ನೀವು ವಿದ್ಯುತ್, ಗ್ಯಾಸ್, ನೀರಿನ, ಮೊಬೈಲ್ ರೀಚಾರ್ಜ್, ಬಾಡಿಗೆ ಮತ್ತು ಇತರೆ ಪಾವತಿಗಳನ್ನು ಮಾಡಬಹುದು. 2020 ರಲ್ಲಿ ಭಾರತದದಲ್ಲಿ ಯುಪಿಐ ಪಾವತಿ ಪ್ರಾರಂಭವಾದ ನಂತರ, ಇದೀಗ ವಾಟ್ಸಾಪ್ ಬಳಕೆದಾರರಿಗೆ ಪಾವತಿ, ಹಾಗೂ ಬಿಲ್ ಪಾವತಿಗಳು ಮತ್ತಷ್ಟು ಸುಲಭವಾಗುತ್ತಿವೆ.
ಪ್ರಸ್ತುತ, WhatsApp ಬಳಕೆದಾರರು ಯುಪಿಐ ಮೂಲಕ ಹಣವನ್ನು ಕಳುಹಿಸುತ್ತಿದ್ದಾರೆ ಮತ್ತು ಸ್ವೀಕರಿಸುತ್ತಿದ್ದಾರೆ. ಬಿಲ್‌ಗಳನ್ನು ಸಹ ಶೀಘ್ರದಲ್ಲೇ ಪಾವತಿಸಲಾಗುವುದು. ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲವೂ ಲಭ್ಯವಿರುವುದರಿಂದ ಸಮಯ ಮತ್ತು ಶ್ರಮ ಉಳಿಸುತ್ತದೆ. ಈಗಾಗಲೇ ವಾಟ್ಸಾಪ್ ಪೇ ವೈಶಿಷ್ಟ್ಯದೊಂದಿಗೆ ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದಾಗಿದೆ.