ಪ್ರಧಾನಿ ನರೇಂದ್ರ ಮೋದಿ (PM Modi) ಫ್ರಾನ್ಸ್‌ನ ಪ್ಯಾರಿಸಿನಲ್ಲಿ ನಡೆಯಲಿರುವ ಎಐ ಶೃಂಗಸಭೆ 2025ರಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದ್ದಾರೆ. ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
ಫ್ರಾನ್ಸ್ ಭೇಟಿಯ ಮುಖ್ಯ ಅಂಶಗಳು
- ಎಐ ಕ್ರಿಯಾ ಶೃಂಗಸಭೆ: ಜಾಗತಿಕ ತಜ್ಞರು ಮತ್ತು ನಾಯಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಿದ್ದಾರೆ.
- ಭಾರತೀಯ ದೂತಾವಾಸ ಉದ್ಘಾಟನೆ: ಮಾರ್ಸಿಲ್ಲೆಯಲ್ಲಿ ಭಾರತದ ಮೊದಲ ಕಾನ್ಸುಲೇಟ್ ಉದ್ಘಾಟನೆ.
- ಅಂತಾರಾಷ್ಟ್ರೀಯ ಪ್ರಾಯೋಗಿಕ ರಿಯಾಕ್ಟರ್ ಯೋಜನೆ (ITER) ಪರಿಶೀಲನೆ.
- ಭಾರತೀಯ ಯೋಧರಿಗೆ ಗೌರವ: 1ನೇ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಕೆ.
ಫ್ರಾನ್ಸ್ ಬಳಿಕ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಎಐ ಮಹತ್ವಾಕಾಂಕ್ಷೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್: ಚೀನಾದ ಒನ್ ಬೇಲ್ಟ್ ಒನ್ ರೋಡ್ ಯೋಜನೆಗೆ ಪ್ರತ್ಯಾಮ್ನವಾಗಿ ಈ ಯೋಜನೆ ರೂಪಿಸಲಾಗಿದೆ.
ಉಭಯ ದೇಶಗಳ ಸಂಬಂಧ ಬಲಪಡಿಸುವ ಮಾತುಕತೆ: ದ್ವಿಪಕ್ಷೀಯ ಸಂಬಂಧ ಹಾಗೂ ತೆರಿಗೆ ನೀತಿ ಕುರಿತು ಚರ್ಚೆ. ಮೋದಿ ಅವರ ಈ ಭೇಟಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.