ಮಹಾತ್ಮ ಗಾಂಧೀಜಿ, (Mahatma Gandhiji) ಬ್ರಿಟೀಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿ, ಪ್ರತಿ ಕುಟುಂಬದ ಉತ್ತಮ ಜೀವನಕ್ಕಾಗಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧಕ್ಕಾಗಿ ಹೋರಾಡಿದವರು. ಆದರೆ, ಇದೀಗ ಅವರ ಭಾವಚಿತ್ರವನ್ನೇ ಬಿಯರ್ ಕ್ಯಾನ್‌ನಲ್ಲಿ ಪ್ರಿಂಟ್ ಮಾಡಲಾಗಿದೆ, ಇದು ಗಾಂಧೀಜಿಯವರಿಗೆ ಅವಮಾನವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಒಂದು ಬಿಯರ್ ಕಂಪನಿ, ರೆವರ್ಟ್ ಬ್ರಾಂಡ್, ಗಾಂಧೀಜಿಯವರ ಭಾವಚಿತ್ರ ಮತ್ತು ಸಹಿಯನ್ನು ತಮ್ಮ ಹೆಜ್‌ಐಪಿಎ ಬಿಯರ್ ಕ್ಯಾನ್ ಗಳಲ್ಲಿ ಮುದ್ರಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಸಾಮಾಜಿಕ ಸಂವೇದನೆ ಉಂಟುಮಾಡಿದ್ದು, ಗಾಂಧೀಜಿಯವರ ಮದ್ಯ ಮುಕ್ತ ಸಮಾಜದ ಕನಸು ಮತ್ತು ವಿಚಾರಗಳಿಗೆ ವಿರುದ್ಧವಾಗಿದೆ ಎಂದು ನೆಟ್ಟಿಗರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಘಟನೆ ಇದಕ್ಕೆ ಮೊದಲು ಅಮೆರಿಕಾದ ಕಂಪೆನಿಯೊಂದರಿಂದವೂ ನಡೆದಿದೆ, ಆದರೆ ಆ ವೇಳೆ ಹೈದರಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಕಂಪನಿಯು ಕ್ಷಮೆಯಾಚಿಸಿಕೊಂಡಿತ್ತು.