Home News Champions Trophy 2025: ಆಟಗಾರರೊಂದಿಗೆ ಕುಟುಂಬಸ್ಥರಿಗೆ ಅವಕಾಶ ಇಲ್ಲ

Champions Trophy 2025: ಆಟಗಾರರೊಂದಿಗೆ ಕುಟುಂಬಸ್ಥರಿಗೆ ಅವಕಾಶ ಇಲ್ಲ

173
Champions Trophy 2025


ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ (Champions Trophy) ಫೆಬ್ರವರಿ 15ರಂದು ದುಬೈಗೆ ತೆರಳಲಿರುವ ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಅವರ ಕುಟುಂಬಸ್ಥರು ಹೋಗಲು ಅವಕಾಶವಿರುವುದಿಲ್ಲ. ಬಿಸಿಸಿಐನ ಈ ಹೊಸ ನಿಯಮ ಇದೇ ಮೊದಲ ಬಾರಿ ಜಾರಿಗೆ ಬರಲಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ

  • ಫೆ. 20: ಬಾಂಗ್ಲಾದೇಶ ವಿರುದ್ಧ, ದುಬೈ
  • ಫೆ. 23: ಪಾಕಿಸ್ತಾನ ವಿರುದ್ಧ, ದುಬೈ
  • ಮಾ. 2: ನ್ಯೂಜಿಲೆಂಡ್ ವಿರುದ್ಧ, ದುಬೈ
  • ಫೈನಲ್: ಮಾ. 9 (ಪಾಕಿಸ್ತಾನ)

ಹೊಸ ನಿಯಮದ ವಿವರಗಳು

  • ಪ್ರವಾಸದ ಅವಧಿ ಮೂರು ವಾರಗಳಷ್ಟೇ ಇರುವುದರಿಂದ ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ.
  • 45 ದಿನಗಳಿಗಿಂತ ಹೆಚ್ಚು ಇರುವ ಪ್ರವಾಸಗಳಲ್ಲಿ ಮಾತ್ರ ಕುಟುಂಬ ಸದಸ್ಯರು ಗರಿಷ್ಠ ಎರಡು ವಾರಗಳ ಕಾಲ ಆಟಗಾರರೊಂದಿಗೆ ಇರಬಹುದು.
  • ವಿನಾಯಿತಿ ಬೇಕಾದರೆ ಕೋಚ್, ನಾಯಕ ಮತ್ತು ಆಪರೇಶನ್ಸ್ ಜಿಎಂ ಅನುಮತಿ ಅಗತ್ಯ.
  • ವಿದೇಶಿ ಪ್ರವಾಸದಲ್ಲಿ ಹೆಚ್ಚುವರಿ ವೆಚ್ಚವನ್ನು ಆಟಗಾರರೇ ಭರಿಸಬೇಕಾಗುತ್ತದೆ.
  • ಇಂಗ್ಲೆಂಡ್ ನಲ್ಲಿ ಜೂನ್-ಜುಲೈ-ಆಗಸ್ಟ್ ನಲ್ಲಿ ನಡೆಯುವ ಐದು ಟೆಸ್ಟ್ ಪಂದ್ಯಗಳ ಸಮಯದಲ್ಲಿ ಕುಟುಂಬ ಸದಸ್ಯರಿಗೆ ಅನುಮತಿ ನೀಡಲಾಗುವುದು.

ಬಿಸಿಸಿಐನ ಈ ಹೊಸ ನಿಯಮ ಆಟಗಾರರ ತಯಾರಿಗೆ ಏನಾದರೂ ಪರಿಣಾಮ ಬೀರುತ್ತದೆಯೇ ಎನ್ನುವುದನ್ನು ನೋಡಬೇಕಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page