ಬಾರ್ಸಿಲೋನಾದಲ್ಲಿ ಉಗಾಂಡಾದ ಓಟಗಾರ ಜಾಕೋಬ್ ಕಿಪ್ಲಿಮೊ (Jacob Kiplimo) ಅವರು ಹಾಫ್ ಮ್ಯಾರಥಾನ್ (half marathon) ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 2021ರಲ್ಲಿ ಪಡೆದ ಪ್ರಶಸ್ತಿಯ ನಂತರ, 24 ವರ್ಷದ ಕಿಪ್ಲಿಮೊ ಈಗ 21.0975 ಕಿಮೀ ಅಂತರವನ್ನು ಕೇವಲ 57 ನಿಮಿಷಗಳೊಳಗೆ ಪೂರ್ಣಗೊಳಿಸಿದ ಮೊದಲ ಅಥ್ಲೀಟ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.
ಈ ಸಾಧನೆಯ ಮೂಲಕ, ಅವರು ಇಥಿಯೋಪಿಯಾದ ಯೋಮಿಫ್ ಕೆಜೆಲ್ಚಾ ಅವರು ವೇಲೆನ್ಸಿಯಾದಲ್ಲಿ ಸ್ಥಾಪಿಸಿದ್ದ 57 ನಿಮಿಷ 30 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮುರಿದರು. ಬಾರ್ಸಿಲೋನಾ ಹಾಫ್ ಮ್ಯಾರಥಾನ್ ಅನ್ನು 56 ನಿಮಿಷ 42 ಸೆಕೆಂಡುಗಳಲ್ಲಿ ಮುಗಿಸುವ ಮೂಲಕ ಹೊಸ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
ಹತ್ತಿರಹತ್ತಿರ 13 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಗಾಳಿಯಿಲ್ಲದ ಸೂಕ್ತ ಹವಾಮಾನದಲ್ಲಿ ಕಿಪ್ಲಿಮೊ ಓಡಿದರು. ಪ್ರಾರಂಭದಲ್ಲಿ, ಅವರು ಪ್ರತಿ ಕಿಮೀಗೆ 2:45 ವೇಗದಲ್ಲಿ ಓಡಲು ಆರಂಭಿಸಿದರು. ಆದರೆ ಮೂರನೇ ಕಿಲೋಮೀಟರ್ ಬಳಿಕ, ತಮ್ಮ ವೇಗವನ್ನು ಹೆಚ್ಚಿಸಿ ನಿರೀಕ್ಷೆಗಿಂತ ಶೀಘ್ರವಾಗಿ ಓಟವನ್ನು ಮುಗಿಸಿದರು.
ಅರ್ಧ-ಮ್ಯಾರಥಾನ್ ದಾಖಲೆಯ ಜೊತೆಗೆ, ಕಿಪ್ಲಿಮೊ 15 ಕಿಮೀ ಓಟವನ್ನು ಕೇವಲ 40 ನಿಮಿಷ 7 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ.