ದೆಹಲಿ: 1984ರ ಸಿಖ್ ವಿರೋಧಿ ದಂಗೆ (Anti-Sikh riots) ಸಂಬಂಧಿಸಿದ ಪ್ರಕರಣದಲ್ಲಿ, ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (Sajjan Kumar) ಅವರನ್ನು ಮರಣದಂಡನೆಗೆ ಶಿಫಾರಸು ಮಾಡಲಾಗಿದೆ. 1984ರ ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ತಂದೆ-ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಪ್ರಾಸಿಕ್ಯೂಷನ್ ಅವರು ತೀವ್ರ ಶಿಕ್ಷೆ ವಿಧಿಸಲು ಮನವಿ ಮಾಡಿದ್ದಾರೆ.
ಫೆಬ್ರವರಿ 21ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಈ ಮೊದಲು, ಫೆ. 12ರಂದು ರೋಸ್ ಅವೆನ್ಯೂ ನ್ಯಾಯಾಲಯವು ಸಜ್ಜನ್ ಕುಮಾರ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು.
ಇಂದಿರಾ ಗಾಂಧಿ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜನ್ ಕುಮಾರ್ ದಂಗೆ ನಡೆಸಿದ ಗುಂಪನ್ನು ಮುನ್ನಡೆಸಿದರೆಂದು ಆರೋಪಿಸಲಾಗಿದೆ. ಗುಂಪು ಸಿಖ್ಖರ ಮನೆ ಮೇಲೆ ದಾಳಿ ಮಾಡಿ, ಇಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿದಲ್ಲದೆ, ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಾವೇರಿ ಬವೇಜಾ, ಸಜ್ಜನ್ ಕುಮಾರ್ ಅಪರಾಧಿ ಎಂದು ಘೋಷಿಸಿದ್ದು, ಫೆಬ್ರವರಿ 21ರಂದು ಶಿಕ್ಷೆಯ ಅಂತಿಮ ತೀರ್ಪು ಪ್ರಕಟವಾಗಲಿದೆ.