ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಮುನ್ನವೇ ನಡೆಯಬೇಕಿತ್ತು. ಆದರೆ ವಿವಿಧ ವಿಚಾರಗಳಿಂದಾಗಿ ಇದು ಕೋರ್ಟ್‌ನಲ್ಲಿ ವಿಳಂಬಗೊಂಡಿದೆ. ಮುಂದಿನ ಕೆಲವು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಘೋಷಣೆ ಸಾಧ್ಯವಿದೆ. ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡನೆಯಂತಹ ಕಾರಣಗಳಿಂದ BBMP ಚುನಾವಣೆಗೆ ಇನ್ನೂ ತಡೆ ಉಂಟಾಗಿದೆ.
ಸರ್ಕಾರ ಬೆಂಗಳೂರನ್ನು ಐದು ಭಾಗಗಳಾಗಿ ವಿಂಗಡಿಸಲು ಮುಂದಾಗಿದೆ. ಈ ಕುರಿತಂತೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಮಿತಿ ರಚಿಸಿ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡುವಂತೆ ಸೂಚಿಸಿದ್ದಾರೆ. ಮಹಿಳೆಯರಿಗೆ ಶೇ.50 ಮೀಸಲಾತಿ ನೀಡುವ ಪ್ರಸ್ತಾಪವಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿವೈ ವಿಜಯೇಂದ್ರ, ಆರ್. ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಬಿಜೆಪಿ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದೆ. ಅವರ ವಿರೋಧಕ್ಕೆ ಹಲವು ಕಾರಣಗಳಿವೆ.
- ಬೆಂಗಳೂರಿನ ಗಾತ್ರ ಹಿಗ್ಗಿದರೆ ನಿರ್ವಹಣೆ ಕಷ್ಟ.
- ಎಲ್ಲಾ ವಲಯಗಳಲ್ಲಿ ಕಾಂಗ್ರೆಸ್ ಮೇಯರ್ ಗಾದಿ ಹಿಡಿಯುವ ಸಾಧ್ಯತೆ.
- ತ್ಯಾಜ್ಯ ವಿಲೇವಾರಿ, ನೀರು, ವಿದ್ಯುತ್ ಸರಬರಾಜು ಸೇವೆಗಳ ಮೇಲಿನ ಪ್ರಭಾವ.
- ಮೂಲಭೂತ ಸೌಕರ್ಯ ಒದಗಿಸಲು ಬಿಬಿಎಂಪಿಗೆ ಸವಾಲು.
- ಬೆಂಗಳೂರಿನ ಇತಿಹಾಸಕ್ಕೆ ಧಕ್ಕೆ, ತಾರತಮ್ಯ.
- ಆಡಳಿತ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ.
- ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ.
- ಇತರ ಮೆಟ್ರೋ ನಗರಗಳಲ್ಲಿ ಈ ಮಾದರಿ ಪ್ರಾಜೆಕ್ಟ್‌ಗಳು ವಿಫಲವಾಗಿರುವ ಉದಾಹರಣೆ.
ಬಿಜೆಪಿ ಈ ಯೋಜನೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುವ ನಿರ್ಧಾರ ತೆಗೆದುಕೊಂಡಿದೆ.