back to top
19.3 C
Bengaluru
Monday, November 10, 2025
HomeNewsPakistanaದಲ್ಲಿ ಚೀನೀ Airport- ವಿಮಾನ ಇಲ್ಲ, ಪ್ರಯೋಜನವಿಲ್ಲ

Pakistanaದಲ್ಲಿ ಚೀನೀ Airport- ವಿಮಾನ ಇಲ್ಲ, ಪ್ರಯೋಜನವಿಲ್ಲ

- Advertisement -
- Advertisement -


ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ಪಟ್ಟಣದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಲಾಗಿದೆ. 2024ರ ಅಕ್ಟೋಬರ್‌ನಲ್ಲಿ ಈ Airport ನಿರ್ಮಾಣಕ್ಕೆ ₹2,000 ಕೋಟಿ (240 ಮಿಲಿಯನ್ ಡಾಲರ್) ಖರ್ಚಾಗಿದೆ. ಆದರೆ, ನಿರ್ಮಾಣದ ನಂತರವೂ ಇಲ್ಲಿ ಒಂದೇ ಒಂದು ವಿಮಾನವೂ ಲ್ಯಾಂಡ್ ಆಗಿಲ್ಲ, ಪ್ರಯಾಣಿಕರ ಸುಳಿವೂ ಇಲ್ಲ!

ಈ Airport ವರ್ಷಕ್ಕೆ 4 ಲಕ್ಷ ಪ್ರಯಾಣಿಕರನ್ನು ನಿಭಾಯಿಸಬಹುದಾದಷ್ಟು ದೊಡ್ಡದು. ಆದರೆ, ಗ್ವಾದರ್‌ನ ಒಟ್ಟು ಜನಸಂಖ್ಯೆ 1 ಲಕ್ಷಕ್ಕೂ ಕಡಿಮೆ. ಇಷ್ಟು ವಿರಳ ಜನಸಂಖ್ಯೆಗೆ ಅಂಥಾ ದೊಡ್ಡ ಏರ್ಪೋರ್ಟ್ ಅಗತ್ಯವೇ ಎಂಬ ಪ್ರಶ್ನೆ ಮೂಡಿದೆ.

ಈ Airport ನಿರ್ಮಾಣಕ್ಕೆ ಹಣ ಒದಗಿಸಿದ್ದು ಚೀನಾದೇ. ಪಾಕಿಸ್ತಾನವನ್ನು ಸಾಲದ ಹೊರೆಗೊಳಿಸಿ, ಚೀನಾ ತನ್ನ ಸ್ವಂತ ಬಳಕೆಗೆ ಏರ್ಪೋರ್ಟ್ ನಿರ್ಮಿಸಿರುವಂತೆ ಕಾಣುತ್ತದೆ. ಗ್ವಾದರ್ ಬಂದರು ನಗರಿಯಾಗಿರುವುದರಿಂದ, ಚೀನಾ ತನ್ನ ಸರಕು ಸಾಗಣೆಗೆ ಇದನ್ನು ಬಳಸಲು ಸಾಧ್ಯ.

ಗ್ವಾದರ್ ಒಮ್ಮೆ ಓಮನ್ ದೇಶದ ನಿಯಂತ್ರಣದಲ್ಲಿತ್ತು. ಓಮನ್ ಇದನ್ನು ಭಾರತಕ್ಕೆ ನೀಡಲು ಸನ್ನದ್ಧವಾಗಿದ್ದರೂ, ಆ ಸಮಯದಲ್ಲಿ ಭಾರತ ಆಸಕ್ತಿ ತೋರಲಿಲ್ಲ. ಕೊನೆಗೆ, ಪಾಕಿಸ್ತಾನ ಗ್ವಾದರ್ ವಶಕ್ಕೆ ಪಡೆದುಕೊಂಡಿತು. ಆದರೆ, ಪಾಕಿಸ್ತಾನದ ಆಡಳಿತ ಬಂದ ಬಳಿಕ ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬಲೂಚಿಸ್ತಾನ್ ಪ್ರಾಂತ್ಯದ ಜನರು ಪಾಕಿಸ್ತಾನದಿಂದ ಬೇರ್ಪಡುವ ಹೋರಾಟ ನಡೆಸುತ್ತಿದ್ದಾರೆ. ಚೀನಾ ಇಲ್ಲಿನ ಅನೇಕ ವಾಣಿಜ್ಯ ಯೋಜನೆಗಳಲ್ಲಿ ತೊಡಗಿಕೊಂಡಿದ್ದು, ಚೀನೀ ನಾಗರಿಕರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿ ಪರಿಣಮಿಸಿದೆ. ಗ್ವಾದರ್ ಏರ್ಪೋರ್ಟ್ ನಿರ್ಮಾಣದಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ, ಆದರೆ ಚೀನಾಗೆ ಮಾತ್ರ ಹಲವು ಪ್ರಯೋಜನಗಳಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page