back to top
16.5 C
Bengaluru
Monday, February 16, 2026
HomeBusinessBank Account: ಗ್ರಾಹಕರಿಗೆ ಶಾಕ್! ನಿಮ್ಮ ಖಾತೆಯಿಂದ ಹಣ ಕಡಿತ ಯಾಕೆ?

Bank Account: ಗ್ರಾಹಕರಿಗೆ ಶಾಕ್! ನಿಮ್ಮ ಖಾತೆಯಿಂದ ಹಣ ಕಡಿತ ಯಾಕೆ?

- Advertisement -
- Advertisement -


ನೀವು ಯಾರಿಗೂ ಹಣ ಕಳಿಸಿಲ್ಲ, ಯಾವುದೇ ಮೆಸೇಜ್ ಬಂದಿಲ್ಲ, ಆದರೂ ನಿಮ್ಮ ಬ್ಯಾಂಕ್ ಖಾತೆಯಿಂದ(Bank Account) 236 ರೂಪಾಯಿ ಕಡಿತ ಆಗಿದೆಯಾ? ಈ ಸಮಸ್ಯೆ ಒಬ್ಬರಿಗೆ ಮಾತ್ರ ಅಲ್ಲ, ಹಲವರಿಗೂ ಎದುರಾಗುತ್ತಿದೆ. ನಿಜವಾದ ಕಾರಣ ಎಂದರೆ, ಹಣಕಾಸು ವರ್ಷ ಮುಗಿಯುತ್ತಿದ್ದಂತೆ SBI ಬ್ಯಾಂಕ್ ತನ್ನ ಎಟಿಎಂ ಕಾರ್ಡ್‌ಗಳಿಗೆ ವಾರ್ಷಿಕ ಶುಲ್ಕ ವಿಧಿಸುತ್ತಿದೆ.

SBI ಕಾರ್ಡ್ ಶುಲ್ಕ ವಿವರ

  • ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಕಾರ್ಡ್: ₹236 (₹200+18% GST)
  • ಯುವ, ಗೋಲ್ಡ್, ಕಾಂಬೊ, ಮೈ ಕಾರ್ಡ್: ₹250 + GST
  • ಪ್ಲಾಟಿನಂ ಕಾರ್ಡ್: ₹350 + GST
  • ಪ್ರೈಡ್ ಮತ್ತು ಪ್ರೀಮಿಯಂ ಕಾರ್ಡ್: ₹425 + GST

ಈ ಶುಲ್ಕ ನಿಮ್ಮ ಖಾತೆಯಿಂದ “ಖಾತೆ ನಿರ್ವಹಣಾ ಶುಲ್ಕ” ಹೆಸರಿನಲ್ಲಿ ಕಡಿತಗೊಳ್ಳುತ್ತದೆ. ಕೆಲವರಿಗೆ ಈ ಬಗ್ಗೆ ಮೆಸೇಜ್ ಬಂದಿರಬಹುದು.

ಯುಪಿಐ ವಹಿವಾಟಿನ ಹೊಸ ನಿಯಮ

  • ಎಸ್‌ಬಿಐ ಯುಪಿಐ ಬಳಕೆದಾರರಿಗೆ ಹೊಸ ಮಿತಿ ವಿಧಿಸಿದೆ.
  • ಒಬ್ಬ ಬಳಕೆದಾರ ದಿನಕ್ಕೆ ಗರಿಷ್ಠ 10 ವಹಿವಾಟು ಮಾತ್ರ ಮಾಡಬಹುದು.
  • ಒಟ್ಟು ಹಣಕಾಸು ಮಿತಿ ₹1 ಲಕ್ಷ ಪ್ರತಿದಿನ.
  • ಹೆಚ್ಚಿನ ವಹಿವಾಟು ಮಾಡಲು ಯೋನೋ ಆ್ಯಪ್ ಬಳಸಿ.

ನಿಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ಅನಿರೀಕ್ಷಿತ ಹಣ ಕಡಿತಗೊಂಡಿದೆಯಾ? ಇದಕ್ಕೆ ಮೇಲಿನ ಕಾರಣವಿರಬಹುದು. ಯಾವುದೇ ಅನುಮಾನ ಇದ್ದರೆ, ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page