Bengaluru: ಕರ್ನಾಟಕದ ಪ್ರವಾಸೋದ್ಯಮವನ್ನು ವಿಶ್ವದ ಮಟ್ಟಿಗೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಇಂಟರ್ನ್ಯಾಷನಲ್ ಟೂರಿಸಂ ಎಕ್ಸ್ಪೋ-2025 (KITE-Karnataka International Tourism Expo-2025) ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ನಡೆಯುವ ಈ ಮಹತ್ವದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಚಾಲನೆ ನೀಡಿದರು.
ಈ Expoದಲ್ಲಿ 124 ಸ್ಟಾಲ್‌ಗಳು ರಾಜ್ಯದ ಪ್ರವಾಸಿ ತಾಣಗಳು, ಕಲೆ-ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ, ಪಾಕಪದ್ಧತಿ, ನೃತ್ಯಶೈಲಿ ಹಾಗೂ ಅತಿಥಿ ಸತ್ಕಾರದ ಬಗ್ಗೆ ಮಾಹಿತಿ ನೀಡಲಿವೆ. 36 ದೇಶಗಳ 92 ಇಂಟರ್ನ್ಯಾಷನಲ್ ಟ್ರಾವೆಲ್ಸ್ ಕಂಪನಿಗಳು, 15 ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್‌ಗಳು, ಮತ್ತು ದೇಶದ ವಿವಿಧ ಭಾಗಗಳ ಪ್ರವಾಸ ನಿರ್ವಾಹಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಇಂಡಿಯನ್ ಹೋಟೆಲ್ & ರೆಸ್ಟೋರೆಂಟ್ ಅಸೋಸಿಯೇಷನ್, IATO, ADTOI, ATOAI, TAAI, FKCCI, FHRAI, SKAL, SIHRA, TAFI ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯದ ಪ್ರಮುಖ ಸಂಸ್ಥೆಗಳು ಈ ಸಮಾವೇಶದಲ್ಲಿ ಭಾಗಿಯಾಗಲಿವೆ.
KITE-2025 ಅನ್ನು ಕರ್ನಾಟಕದ ಐಕಾನಿಕ್ ಪ್ರವಾಸಿ ತಾಣಗಳು, ಉದಯೋನ್ಮುಖ ತಾಣಗಳು, ಸಾಹಸ ಪ್ರವಾಸೋದ್ಯಮ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.
ಈ ಎಕ್ಸ್ಪೋ ಸಣ್ಣ ಮತ್ತು ಮಧ್ಯಮ ಪ್ರವಾಸೋದ್ಯಮ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ತಲುಪಲು ಸಹಕಾರಿಯಾಗಲಿದೆ. ಪ್ರವಾಸೋದ್ಯಮದಿಂದ ಸ್ಥಳೀಯ ವಸತಿ, ಊಟ, ಸಾರಿಗೆ ಮತ್ತು ಆಕರ್ಷಣಾ ಕೇಂದ್ರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಇಲ್ಲಿಯ ತನಕ ಹೆಚ್ಚು ಗಮನ ಸೆಳೆಯದ offbeat ತಾಣಗಳು ಮತ್ತು ಹೊಸ ಪ್ರವಾಸಿ ತಾಣಗಳ ಬಗ್ಗೆ ಜಾಗತಿಕ ಪ್ರವಾಸಿಗರಿಗೆ ಮಾಹಿತಿ ನೀಡಲಾಗುವುದು. ಇದರ ಮೂಲಕ ಪ್ರಮುಖ ಪ್ರವಾಸಿ ತಾಣಗಳ ಒತ್ತಡ ಕಡಿಮೆಯಾಗುವಂತೆ ಮಾಡಲಾಗುವುದು.
ಈ ಮೂಲಕ KITE-2025, ಕರ್ನಾಟಕ ಪ್ರವಾಸೋದ್ಯಮದ ಭವಿಷ್ಯವನ್ನು ಮತ್ತಷ್ಟು ಬೆಳಸಿ, ಆರ್ಥಿಕ ಬೆಳವಣಿಗೆ ಹಾಗೂ ಪರಂಪರೆಯ ಸಂರಕ್ಷಣೆಗೆ ಪೂರಕವಾಗಲಿದೆ.