back to top
29.8 C
Bengaluru
Monday, March 10, 2025
HomeIndiaBengaluru-Chennai Expresswayನಲ್ಲಿ ಅಪಘಾತ: ದ್ವಿಚಕ್ರ ವಾಹನಗಳಿಗೆ ನಿಷೇಧ

Bengaluru-Chennai Expresswayನಲ್ಲಿ ಅಪಘಾತ: ದ್ವಿಚಕ್ರ ವಾಹನಗಳಿಗೆ ನಿಷೇಧ

- Advertisement -
- Advertisement -

ಬೆಂಗಳೂರು-ಚೆನ್ನೈ Expressway (Bengaluru-Chennai Expressway) ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸಲು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, ಈ ಹೆದ್ದಾರಿಯನ್ನು ಅನಧಿಕೃತವಾಗಿ ವಾಹನಗಳ ಸಂಚಾರಕ್ಕೆ ತೆರೆಯಲಾಗಿತ್ತು. ಭಾನುವಾರ ತಡರಾತ್ರಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಬಳಿಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಚ್ಚರಿಕೆಯ ಕ್ರಮವಾಗಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದೆ.

NHAI ಅಧಿಕಾರಿಯೊಬ್ಬರು, “Expressway ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೈಕ್ ಸೇರಿದಂತೆ ಎಲ್ಲ ರೀತಿಯ ದ್ವಿಚಕ್ರ ವಾಹನಗಳ ಪ್ರವೇಶವನ್ನು ತಡೆಯಲಾಗಿದೆ. ಜೊತೆಗೆ, ಸಾರ್ವಜನಿಕರಿಗೆ ಈ ನಿರ್ಬಂಧದ ಮಾಹಿತಿ ನೀಡಲು ನಾಮಫಲಕಗಳನ್ನು ಅಳವಡಿಸುವ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಬೈಕ್‌ ಒಂದು ಇನ್ನೋವಾ ಕಾರಿಗೆ ಡಿಕ್ಕಿಯಾದ ಪರಿಣಾಮ ನಡೆದಿದೆ. Expresswayನಲ್ಲಿ ವಾಹನಗಳು ಸಾಮಾನ್ಯವಾಗಿ 120 ಕಿಮೀ/ಘಂ ವೇಗದಲ್ಲಿ ಸಂಚರಿಸುತ್ತವೆ. ಕಾರುಗಳು ಮತ್ತು ಇತರ ದೊಡ್ಡ ವಾಹನಗಳು ಗರಿಷ್ಠ ವೇಗದಲ್ಲಿ ಚಲಿಸುವ ಕಾರಣ, ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆ ಅಪಾಯಕಾರಿ. ಇದರಿಂದ, ದ್ವಿಚಕ್ರ ವಾಹನ ಸವಾರರು ತಮ್ಮ ಜೀವಕ್ಕೂ ಅಪಾಯ ತರುವ ಹಾಗಾಗುತ್ತದೆ ಮತ್ತು ಇತರ ಪ್ರಯಾಣಿಕರಿಗೂ ಅಪಾಯ ಉಂಟುಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು-ಚೆನ್ನೈ Expressway ವಿಶೇಷತೆಗಳು

  • ಉದ್ದ: 262 ಕಿಲೋಮೀಟರ್
  • ಕರ್ನಾಟಕ ವ್ಯಾಪ್ತಿ: 71 ಕಿಮೀ (ಹೊಸಕೋಟೆ-ಕೆಜಿಎಫ್ ನಡುವೆ 68 ಕಿಮೀ ರಸ್ತೆ ಬಳಕೆಗೆ ಮುಕ್ತ)
  • ಖರ್ಚು: ರೂ. 17,000 ಕೋಟಿ
  • ಪಥಗಳು: ಪ್ರಸ್ತುತ 4, ಭವಿಷ್ಯದಲ್ಲಿ 8ಕ್ಕೆ ವಿಸ್ತರಣಾ ಸಾಧ್ಯತೆ
  • ಮೇಲ್ಸೇತುವೆಗಳು: 17
  • ಕೆಳ ಸೇತುವೆಗಳು: 41
  • ಸಂಪರ್ಕ ಗುರಿ: ಕರ್ನಾಟಕ (ಬೆಂಗಳೂರು ಗ್ರಾಮಾಂತರ, ಕೋಲಾರ), ಆಂಧ್ರ ಪ್ರದೇಶ (ಚಿತ್ತೂರು), ತಮಿಳುನಾಡು (ರಾಣಿಪೇಟೆ, ಶ್ರೀಪೆರಂಬದೂರು)
  • ಪ್ರಯಾಣ ಅವಧಿ ಕಡಿತ: 2-3 ಗಂಟೆ ಇಳಿಕೆಯಾಗುವ ನಿರೀಕ್ಷೆ

ಈ ಹೆದ್ದಾರಿ ಪೂರ್ಣಗೊಂಡ ಬಳಿಕ, ಪ್ರವಾಸೋದ್ಯಮ, ಶೈಕ್ಷಣಿಕ ಕ್ಷೇತ್ರ ಮತ್ತು ವಾಣಿಜ್ಯ ವಲಯಗಳು ಹೆಚ್ಚಿನ ಬೆಳವಣಿಗೆ ಕಾಣಲಿವೆ ಎಂದು ನಿರೀಕ್ಷಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page