
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ (Rangasthala) ದೇವಾಲಯದಲ್ಲಿ ಭಾನುವಾರ ಸಾಮೂಹಿಕ ವಿವಾಹವನ್ನು (Mass Marriages) ಅದ್ದೂರಿಯಾಗಿ ನಡೆಸಲಾಯಿತು. ಸಾಮೂಹಿಕ ವಿವಾಹದಲ್ಲಿ 45 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ “ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ. ನಿಮ್ಮ ಜೀವನ ಸುಖವಾಗಲಿದೆ. ಇಬ್ಬರಿಗೂ ಜವಾಬ್ದಾರಿಗಳು ಹೆಚ್ಚಾಗಲಿದೆ. ಜೀವನದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಜೊತೆಯಲ್ಲಿ ಎದುರಿಸಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ದರಾಜು ಸ್ವಾಮಿ, ಅಂಬೇಡ್ಕರ್ ಸೇನೆ ಜಿಲ್ಲಾ ಅಧ್ಯಕ್ಷ ಪಿಳ್ಳಾಂಜಿನಪ್ಪ, ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪಟ್ರೇನಹಳ್ಳಿ ಕೃಷ್ಣ, ನರಸಿಂಹ ರಾಜು, ಸುನಿಲ್ ಕುಮಾರ್, ಅನಿಲ್, ಮಂಜುನಾಥ್, ಎನ್‌ಟಿಆರ್, ರಾಮಣ್ಣ, ಚಲಪತಿ, ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ರಂಗಸ್ಥಳದಲ್ಲಿ ಸಾಮೂಹಿಕ ವಿವಾಹ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.