Damascus (Syria): ಸಿರಿಯಾದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಲ್ಲಿ ಕೇವಲ ಎರಡು ದಿನಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸಿರಿಯನ್ ಭದ್ರತಾ ಪಡೆಗಳು ಮತ್ತು ಮಾಜಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಬೆಂಬಲಿಗರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ ಎಂದು ಯುದ್ಧ ಮೇಲ್ವಿಚಾರಣಾ ತಂಡ ಮಾಹಿತಿ ನೀಡಿದೆ.
ಲಟಾಕಿಯಾ, ಟಾರ್ಟಸ್ ಮತ್ತು ಹಮಾ ಪ್ರಾಂತ್ಯಗಳಲ್ಲಿ ಸಂಘರ್ಷ ತೀವ್ರವಾಗಿದೆ. ಶುಕ್ರವಾರ ಆರಂಭವಾದ ಹಿಂಸಾಚಾರ ಶನಿವಾರವೂ ಮುಂದುವರಿಯಿತು, ಪರಿಣಾಮವಾಗಿ ಸಾವಿನ ಸಂಖ್ಯೆ 1 ಸಾವಿರ ದಾಟಿದೆ ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ (SOHR) ವರದಿ ನೀಡಿದೆ.
ಸಂಘರ್ಷದಲ್ಲಿ ಮೃತಪಟ್ಟವರ ವಿವರ
- 745 ನಾಗರಿಕರು
- 125 ಸರ್ಕಾರಿ ಭದ್ರತಾ ಪಡೆ ಸಿಬ್ಬಂದಿ
- 148 ಅಸ್ಸಾದ್ ಬೆಂಬಲಿತ ಉಗ್ರರು
- ಇದು ಸಿರಿಯಾದ 14 ವರ್ಷಗಳ ಸಂಘರ್ಷದಲ್ಲಿ ಅತ್ಯಂತ ಭೀಕರ ಘಟನೆಯಾಗಿದೆ ಎಂದು ಮೇಲ್ವಿಚಾರಣಾ ತಂಡ ಹೇಳಿದೆ.
ಸಂಘರ್ಷದಲ್ಲಿ ಸಾವಿಗೀಡಾದ ನಾಗರಿಕರಲ್ಲಿ ಹೆಚ್ಚಿನವರು ಅಲಾವೈಟ್ ಸಮುದಾಯದವರಾಗಿದ್ದಾರೆ. ಸಿರಿಯಾದ ಮಧ್ಯಂತರ ಸರ್ಕಾರವು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ, ಆದರೆ ಅಸ್ಸಾದ್ ಬೆಂಬಲಿಗರು ಭೀಕರ ಹಲ್ಲೆ ಮುಂದುವರಿಸಿದ್ದಾರೆ.
ಭದ್ರತಾ ಪಡೆಗಳ ತಿರುಗೇಟು
- ತಾರ್ಟೌಸ್ ಮತ್ತು ಲಟಾಕಿಯಾ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ದೊಡ್ಡ ಪ್ರಮಾಣದಲ್ಲಿ ಪ್ರತಿದಾಳಿ ನಡೆಸಿವೆ.
- ಅಸ್ಸಾದ್ ಬೆಂಬಲಿಗರು checkpoints, ಭದ್ರತಾ ನೆಲೆಗಳು, ಮಿಲಿಟರಿ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ.
- ಕರಾವಳಿ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ನೂರಾರು ಜನರು ರಷ್ಯಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಸಿರಿಯಾದ ಮಧ್ಯಂತರ ಸರ್ಕಾರದ ಅಧ್ಯಕ್ಷ ಅಹ್ಮದ್ ಅಲ್ ಶರಾ, ಅಸ್ಸಾದ್ ಬೆಂಬಲಿಗರನ್ನು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಲು ಸೂಚಿಸಿದ್ದಾರೆ.