New Delhi: ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್, (Shama Mohammed) ಮೊದಲು ರೋಹಿತ್ ಶರ್ಮಾರ (Rohit Sharma) ದೇಹವನ್ನು ವ್ಯಂಗ್ಯ ಮಾಡಿದ್ದರು, ಆದರೆ ಈಗ ಅವರು ಟೀಂ ಇಂಡಿಯಾಗೆ ಪ್ರಶಂಸೆ ಸಲ್ಲಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ 76 ರನ್ ಗಳಿಸಿ ತಂಡವನ್ನು ಮುನ್ನಡೆಸಿದರೆ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಕೂಡಾ ಉತ್ತಮ ಆಟವಾಡಿದರು.
ಶಮಾ ಮೊಹಮ್ಮದ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಟೀಂ ಇಂಡಿಯಾಗೆ ಅಭಿನಂದನೆಗಳನ್ನು ತಿಳಿಸಿದ್ದರು ಮತ್ತು ರೋಹಿತ್ ಶರ್ಮಾ ನಾಯಕತ್ವವನ್ನು ಕೊಂಡಾಡಿದರು.
ಇತ್ತೀಚಿಗೆ, ರೋಹಿತ್ ಶರ್ಮಾವನ್ನು ‘ಡುಮ್ಮ’ ಎಂದು ವ್ಯಂಗ್ಯ ಮಾಡಿದ್ದ ಶಮಾ, ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದರು. ನಂತರ, ತಮ್ಮ ವಿವಾದಿತ ಪೋಸ್ಟ್ ತೆಗೆದುಹಾಕುವಂತೆ ಪಕ್ಷದ ಹಿರಿಯರಿಂದ ಒತ್ತಡ ಬಂದಿತ್ತು. ಇದೀಗ, ಅವರು ಟೀಂ ಇಂಡಿಯಾ ಗೆಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.