ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ನದಿ ಮತ್ತು ಬೇರೆ ನೀರಿನ ಮೂಲಗಳ ಬಳಿ ಸೋಪು, ಡಿಟರ್ಜೆಂಟ್ ಮತ್ತು ಶ್ಯಾಂಪೂ ಮಾರಾಟವನ್ನು (Ban on sale of soap) ನಿಷೇಧಿಸಲಾಗಿದೆ.
ಜನರು ನದಿಯಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪೂ ಬಳಕೆ ಮಾಡುತ್ತಾರೆ. ಕೆಲವು ಜನ ಹಳೆ ಬಟ್ಟೆ ಮತ್ತು ಬಳಸಿದ ಪ್ಲಾಸ್ಟಿಕ್ ಕವರ್‌ಗಳನ್ನು ಅಲ್ಲೇ ಬಿಟ್ಟು ಬರುತ್ತಾರೆ. ಇದರಿಂದ ನದಿ ನೀರು ಕಲುಷಿತವಾಗುತ್ತದೆ.
ಹೆಚ್ಚಿನ ಪುಣ್ಯ ಕ್ಷೇತ್ರಗಳ ಬಳಿ ನದಿಗಳು ಇರುತ್ತವೆ. ಜನರು ಪುನೀತರಾಗಲು ನದಿ ಸ್ನಾನ ಮಾಡುತ್ತಾರೆ, ಆದರೆ ಸೋಪು ಮತ್ತು ಶ್ಯಾಂಪೂ ಬಳಕೆಯಿಂದ ನೀರಿನ ಶುದ್ಧತೆ ಹಾನಿಯಾಗುತ್ತದೆ. ಇದನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.