ಬೆಂಗಳೂರು ವಾಹನ ದಟ್ಟಣೆ (Bengaluru traffic) ಸಮಸ್ಯೆಗೆ ಪರಿಹಾರ ನೀಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೊಡ್ಡ ನಿರ್ಧಾರ ಮಾಡಿದ್ದಾರೆ. ನಗರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್, (Double-decker flyover) ಸುರಂಗ ರಸ್ತೆ, ಬಫರ್ ರಸ್ತೆ ಮತ್ತು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಡಿಕೆಶಿ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಮಳೆನೀರಿನ ಚರಂಡಿಗಳ ಬಳಿ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ 50 ಅಡಿ ಅಗಲದ ಬಫರ್ ರಸ್ತೆಗಳು ನಿರ್ಮಾಣಗೊಳ್ಳಲಿವೆ ಎಂದು ಘೋಷಿಸಿದರು.
ಮುಖ್ಯ ಯೋಜನೆಗಳು
- ಸುರಂಗ ರಸ್ತೆ: ಪೂರ್ವ-ಪಶ್ಚಿಮ ದಿಕ್ಕಿಗೆ 17 ಕಿ.ಮೀ ಮತ್ತು ಉತ್ತರ-ದಕ್ಷಿಣ ದಿಕ್ಕಿಗೆ 23 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣ
- ಡಬಲ್ ಡೆಕ್ಕರ್ ಫ್ಲೈಓವರ್: ಮೆಟ್ರೋ ಮಾರ್ಗಗಳ ಮೇಲೂ ನಿರ್ಮಾಣ, ಒಟ್ಟು ವೆಚ್ಚ ₹9,000 ಕೋಟಿ
- ಬಫರ್ ರಸ್ತೆ: 300 ಕಿ.ಮೀ ಉದ್ದ, ₹3,000 ಕೋಟಿ ಮೀಸಲು
- ಹೊಸ ರಸ್ತೆಗಳ ನಿರ್ಮಾಣ: 320 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ
- ವೈಟ್–ಟಾಪಿಂಗ್: 1,682 ಕಿ.ಮೀ ರಸ್ತೆಗಳ ಪುನಃ ನಿರ್ಮಾಣಕ್ಕೆ ₹9,000 ಕೋಟಿ ಹಂಚಿಕೆ
- ಮಳೆನೀರು ಚರಂಡಿ: 850 ಕಿ.ಮೀ ಚರಂಡಿ ನಿರ್ಮಾಣಕ್ಕೆ ವಿಶ್ವಬ್ಯಾಂಕಿನಿಂದ ₹2,000 ಕೋಟಿ ಸಾಲ
ಈ ಯೋಜನೆಗಳ ಅನುಷ್ಠಾನದಿಂದ ಬೆಂಗಳೂರು ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರೀಕ್ಷೆಯಿದೆ.