ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮಾರ್ಚ್ 24 ಮತ್ತು 25 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ (Bank strike) ನಡೆಸುವುದಾಗಿ ಘೋಷಿಸಿದೆ.
ಭಾರತೀಯ ಬ್ಯಾಂಕ್ ಗಳ ಸಂಘ (IBA) ಯೊಂದಿಗೆ ನಡೆಸಿದ ಮಾತುಕತೆ ನಿರ್ಧಾರಕ ಫಲಿತಾಂಶ ನೀಡದ ಕಾರಣ, ಮುಷ್ಕರ ನಡೆಸಲು ನಿರ್ಧಾರಿಸಲಾಗಿದೆ.
ಪ್ರಮುಖ ಬೇಡಿಕೆಗಳು
- ಎಲ್ಲಾ ಹುದ್ದೆಗಳಿಗೆ ನೇಮಕಾತಿ
- ವಾರಕ್ಕೆ ಐದು ದಿನಗಳ ಕೆಲಸ
- ಉದ್ಯೋಗ ಭದ್ರತೆ ಮತ್ತು ಪ್ರೋತ್ಸಾಹಕ ಬೇಡಿಕೆಗಳು
- ಸರ್ಕಾರಿ ನೌಕರರಂತೆ ಗ್ರಾಚ್ಯುಟಿ ಮಿತಿ ₹25 ಲಕ್ಷಕ್ಕೆ ಹೆಚ್ಚಿಸುವುದು
ಬ್ಯಾಂಕ್ ಒಕ್ಕೂಟಗಳ ವಿರೋಧ
- ಡಿಎಫ್ಎಸ್ (ಹಣಕಾಸು ಸೇವಾ ಇಲಾಖೆ) ಯ ನಿರ್ದೇಶನಗಳನ್ನು ಹಿಂತೆಗೆದುಕೊಳ್ಳಲು ಒತ್ತಾಯ
- ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯನಿರ್ವಹಣೆಯಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧ
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಎನ್ಸಿಬಿಇ, ಎಐಬಿಒಎ ಸೇರಿದಂತೆ ಒಂಬತ್ತು ಪ್ರಮುಖ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಲಿವೆ.