ಭಾರತದಲ್ಲಿ IPL ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಲೀಗ್ ನಲ್ಲಿ ವಿಶ್ವದ ಹಲವು ಸ್ಟಾರ್ ಆಟಗಾರರು ಭಾಗವಹಿಸಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ನಲ್ಲಿ ಮಾರ್ಚ್ 17 ರಿಂದ ಭಾರತದ ಪ್ರಾಚೀನ ಕ್ರೀಡೆಯಾದ ಕಬಡ್ಡಿ ವಿಶ್ವಕಪ್ (Kabaddi World Cup 2025) ಆರಂಭವಾಗುತ್ತಿದೆ. ಈ ಕ್ರೀಡೆ ಈಗ ಜಾಗತಿಕವಾಗಿ ಪ್ರಸಿದ್ಧಿ ಪಡೆದಿದೆ.
ಎರಡನೇ ಕಬಡ್ಡಿ ವಿಶ್ವಕಪ್ ಇಂಗ್ಲೆಂಡ್ ನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಡೆಯಲಿದ್ದು, 10 ತಂಡಗಳು ಭಾಗವಹಿಸಲಿವೆ. ಈ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳು ಇರಲಿದ್ದು, ಶ್ರೇಷ್ಠ 4 ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯಲಿವೆ. ನಂತರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಭಾರತ ಪುರುಷರ ತಂಡ “ಎ” ಗುಂಪಿನಲ್ಲಿ ಸ್ಥಾನ ಪಡೆದಿದೆ.
ಈ ಬಾರಿ ಮಹಿಳಾ ಕಬಡ್ಡಿ ವಿಶ್ವಕಪ್ ಕೂಡ ಆಯೋಜನೆಗೊಂಡಿದ್ದು, 6 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟಾಪ್ 2 ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ. ಭಾರತ ಮಹಿಳಾ ತಂಡ “ಎ” ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಹಾಲಿ ಚಾಂಪಿಯನ್ ಆಗಿದ್ದು, ಈ ಬಾರಿ ಕೂಡ ಪ್ರಶಸ್ತಿ ಗೆಲ್ಲಲು ಸಜ್ಜಾಗಿವೆ. 2023ರ ಪುರುಷರ ಫೈನಲ್‌ನಲ್ಲಿ ಭಾರತ 57-27 ಅಂಕಗಳಿಂದ ಇರಾಕ್ ತಂಡವನ್ನು ಸೋಲಿಸಿತ್ತು. ಮಹಿಳಾ ಫೈನಲ್‌ನಲ್ಲಿ ಭಾರತ 47-29 ಅಂಕಗಳಿಂದ ತೈವಾನ್ ತಂಡವನ್ನು ಮಣಿಸಿತ್ತು.
ಪುರುಷರ ಗುಂಪುಗಳು
- ಗುಂಪು ಎ: ಹಂಗೇರಿ, ಇಂಗ್ಲೆಂಡ್, ಪೋಲೆಂಡ್, ಜರ್ಮನಿ, ಯುಎಸ್ಎ
- ಗುಂಪು ಬಿ: ಭಾರತ, ಇಟಲಿ, ಸ್ಕಾಟ್ಲೆಂಡ್, ವೇಲ್ಸ್, ಹಾಂಗ್ ಕಾಂಗ್, ಚೀನಾ
ಮಹಿಳಾ ಗುಂಪುಗಳು
- ಗುಂಪು ಎ: ಭಾರತ, ವೇಲ್ಸ್, ಪೋಲೆಂಡ್
- ಗುಂಪು ಬಿ: ಹಾಂಗ್ ಕಾಂಗ್, ಚೀನಾ, ಹಂಗೇರಿ, ಇಂಗ್ಲೆಂಡ್
ಭಾರತ ಪುರುಷರ ತಂಡದ ವೇಳಾಪಟ್ಟಿ
- ಮಾರ್ಚ್ 17: ಭಾರತ vs ಇಟಲಿ
- ಮಾರ್ಚ್ 18: ಭಾರತ vs ಸ್ಕಾಟ್ಲೆಂಡ್
- ಮಾರ್ಚ್ 19: ಭಾರತ vs ಹಾಂಗ್ ಕಾಂಗ್, ಚೀನಾ
- ಮಾರ್ಚ್ 20: ಭಾರತ vs ವೇಲ್ಸ್
ಭಾರತ ತನ್ನ ಹಾಲಿ ಚಾಂಪಿಯನ್ ಹಣೆಪಟ್ಟಿಯನ್ನು ಕಾಯ್ದುಕೊಳ್ಳಲಿದೆಯಾ? ಕಾಯುತ್ತ ನೋಡಿ!