Bengaluru: ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಹೊಂದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ (Kempegowda Airport) ನಿಲ್ದಾಣದಲ್ಲಿ (KIA) ಕೇವಲ 19 ದಿನಗಳ ಅವಧಿಯಲ್ಲಿ 130 ಕೋಟಿ ರೂ. ಮೌಲ್ಯದ ಕಳ್ಳಸಾಗಣೆ ಪತ್ತೆಯಾಗಿದ್ದು, ಇದು ವಿಮಾನ ನಿಲ್ದಾಣದ ಭದ್ರತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ.
ತಾಜಾ ಮೂರು ಪ್ರಕರಣಗಳು
- ಡ್ರಗ್ಸ್ ಜಪ್ತಿ – 75 ಕೋಟಿ ರೂ. ಮಂಗಳೂರು ಪೊಲೀಸರು ಎಂಡಿಎಂಎ ಡ್ರಗ್ಸ್ ದಂಧೆಯನ್ನು ಬಯಲು ಮಾಡಿದ್ದು, ಇಬ್ಬರ ಬಳಿಯಿಂದ 75 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಈ ಡ್ರಗ್ಸ್ ಎರಡು ಟ್ರಾಲಿ ಬ್ಯಾಗ್‌ನಲ್ಲಿ ವಿಮಾನ ನಿಲ್ದಾಣದ ಮೂಲಕ ಸಾಗಿಸಲಾಗಿದೆ.
- ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್- 12 ಕೋಟಿ ರೂ. ಐಪಿಎಸ್ ಅಧಿಕಾರಿ ಪುತ್ರಿ ಹಾಗೂ ನಟಿ ರನ್ಯಾ ರಾವ್ 14.2 ಕೆಜಿ ಚಿನ್ನ (12 ಕೋಟಿ ರೂ. ಮೌಲ್ಯ) ಸ್ಮಗ್ಲಿಂಗ್ ಮಾಡುತ್ತಿದ್ದ ವೇಳೆ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಒಂದು ವರ್ಷದಲ್ಲಿ 26 ಬಾರಿ ದುಬೈ – ಬೆಂಗಳೂರು ಪ್ರಯಾಣ ಮಾಡಿದ್ದು, ಇದಕ್ಕೂ ಮುಂಚೆಲೂ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
- ಕೊಕೇನ್ ಜಪ್ತಿ – 38 ಕೋಟಿ ರೂ. ದೋಹಾ ಮೂಲದ ಜೆನಿಫರ್ ಎಂಬ ಮಹಿಳೆ, 38 ಕೋಟಿ ರೂ. ಮೌಲ್ಯದ ಕೊಕೇನ್ ಸಹಿತ ಡಿಆರ್ಐ ಬಲೆಗೆ ಬಿದ್ದಿದ್ದಾಳೆ. ವಿಚಾರಣೆಯಲ್ಲಿ, ಇದೇ ವಿಮಾನ ನಿಲ್ದಾಣದ ಮೂಲಕ ಮತ್ತಷ್ಟು ಡ್ರಗ್ಸ್ ಸಾಗಣೆ ಮಾಡಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಮೂರು ಪ್ರಕರಣಗಳ ನಂತರ, ಕೆಂಪೇಗೌಡ ವಿಮಾನ ನಿಲ್ದಾಣ ಸ್ಮಗ್ಲಿಂಗ್ ಅಡ್ಡೆಯಾಗುತ್ತಾ? ಎಂಬ ಪ್ರಶ್ನೆ ಉಲ್ಬಣಗೊಂಡಿದೆ. ಕಾನೂನು ನಿಯಂತ್ರಣ ಹೆಚ್ಚಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.