back to top
23.7 C
Bengaluru
Tuesday, November 25, 2025
HomeBusinessNandini milk price hike: ಗ್ರಾಹಕರಿಗೆ ಮತ್ತೊಂದು ಹೊರೆ

Nandini milk price hike: ಗ್ರಾಹಕರಿಗೆ ಮತ್ತೊಂದು ಹೊರೆ

- Advertisement -
- Advertisement -

Bengaluru: ನಂದಿನಿ ಹಾಲಿನ (Nandini milk) ದರ ಮತ್ತೆ ಹೆಚ್ಚಳಗೊಂಡಿದ್ದು, ಗ್ರಾಹಕರಿಗೆ ಈ ದರ ಏರಿಕೆ ತೀವ್ರ ಹೊರೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಪ್ರತಿ ಲೀಟರ್ ಹಾಲಿನ ದರ 4 ರೂ. ಹೆಚ್ಚಿಸಲು ಅನುಮೋದನೆ ನೀಡಿದೆ.

ಇದೇ ವರ್ಷದಲ್ಲಿ ಇದು ಎರಡನೇ ಬಾರಿಗೆ ದರ ಹೆಚ್ಚಳವಾಗಿದ್ದು, ಫೆಬ್ರವರಿಯಲ್ಲೂ ಪ್ರತಿ ಲೀಟರ್ 2 ರೂ. ಏರಿಕೆ ಮಾಡಲಾಗಿತ್ತು. ಈಗ ಲೀಟರ್‌ಗಿಂತ 4 ರೂ. ಹೆಚ್ಚಳ ಮಾಡಲಾಗಿದೆ.

ಹಾಲಿನ ದರ ಹೊಸ ವಿವರಗಳು

  • ಹೋಮೋಜಿನೆಸ್ಟ್ ಟೋನ್ಡ್ ಹಾಲು
  • ಹಳೆಯ ದರ: ಅರ್ಧ ಲೀಟರ್ ₹24, 1 ಲೀಟರ್ ₹45
  • ಹೊಸ ದರ: ಅರ್ಧ ಲೀಟರ್ ₹26, 1 ಲೀಟರ್ ₹49
  • ನೀಲಿ ಪ್ಯಾಕೆಟ್ ಹಾಲು: ₹44 → ₹48 (ಪ್ರತಿ ಲೀಟರ್)
  • ಆರೆಂಜ್ ಪ್ಯಾಕೆಟ್ ಹಾಲು: ₹54 → ₹58
  • ಸಮೃದ್ಧಿ ಹಾಲು: ₹56 → ₹60
  • ಗ್ರೀನ್ ಸ್ಪೆಷಲ್ ಹಾಲು: ₹54 → ₹58
  • ನಾರ್ಮಲ್ ಗ್ರೀನ್ ಹಾಲು: ₹52 → ₹56

ಹಾಲು ಒಕ್ಕೂಟಗಳು ಹಾಗೂ ರೈತರು ದರ ಹೆಚ್ಚಳದ ಬೇಡಿಕೆ ಮುಂದಿಟ್ಟಿದ್ದರು. ಇದರಿಂದಾಗಿ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ. ಜನಸಾಮಾನ್ಯರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದರೆ, ಈ ಹೊಸ ದರ ಏರಿಕೆ ಮತ್ತಷ್ಟು ಆರ್ಥಿಕ ಹೊರೆ ತರಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page