back to top
27.7 C
Bengaluru
Saturday, August 30, 2025
HomeNewsTCS World 10K Marathon– ಬೆಂಗಳೂರು ಸಜ್ಜು!

TCS World 10K Marathon– ಬೆಂಗಳೂರು ಸಜ್ಜು!

- Advertisement -
- Advertisement -

17ನೇ ಆವೃತ್ತಿಯ ಈ ರೇಸ್ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಆಗಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಓಟಗಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.

#EndendiguBengaluru – ForeverBengaluru ಧ್ಯೇಯವಾಕ್ಯದಡಿ ನಡೆಯುವ ಈ ಮ್ಯಾರಥಾನ್, ಜಗತ್ತಿನ ಅತ್ಯುತ್ತಮ ಅಥ್ಲೆಟ್‌ಗಳಿಗೆ ಸ್ಪರ್ಧಾ ವೇದಿಕೆಯನ್ನು ಒದಗಿಸುತ್ತದೆ.

  • ದಿನಾಂಕ: ಏಪ್ರಿಲ್ 27, ಭಾನುವಾರ
  • ಸ್ಥಳ: ಬೆಂಗಳೂರು
  • ಬಹುಮಾನ: $2,10,000

ಚೆಪ್ಟೆಗಿಯ ಮರುಪ್ರವೇಶ

  • ಉಗಾಂಡದ ಸ್ಟಾರ್ ಓಟಗಾರ ಜೋಶುವಾ ಕಿಪ್ರುಯಿ ಚೆಪ್ಟೆಗಿ 11 ವರ್ಷಗಳ ಬಳಿಕ TCS 10K ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
  • 2014ರಲ್ಲಿ ಎರಡನೇ ಸ್ಥಾನ ಪಡೆದಿದ್ದ ಚೆಪ್ಟೆಗಿ, ಈ ಬಾರಿ ಚಿನ್ನ ಗೆಲ್ಲುವ ಗುರಿಯೊಂದಿಗೆ ಓಡುತ್ತಿದ್ದಾರೆ.
  • 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಚಿನ್ನ ಜಯಿಸಿ ತಮ್ಮ ಸ್ಥಿರತೆ ಮೆರೆದಿದ್ದಾರೆ.

ಭಾರತೀಯ ಸ್ಟಾರ್ಸ್

  • ಪುರುಷ ವಿಭಾಗ
  • ಹಾಲಿ ಚಾಂಪಿಯನ್ ಕಿರಣ್ ಮ್ಹಾತ್ರೆ Vs ಸಾವನ್ ಬರ್ವಾಲ್ – ಪ್ರಬಲ ಸ್ಪರ್ಧೆ ನಿರೀಕ್ಷೆ!
  • ಸಾವನ್, ಇತ್ತೀಚೆಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 10,000 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದಾರೆ.
  • ಮಹಿಳಾ ವಿಭಾಗ
  • ಹಾಲಿ ಚಾಂಪಿಯನ್ ಸಂಜೀವನಿ ಜಾಧವ್ Vs ಲಿಲಿ ದಾಸ್ – ತೀವ್ರ ಹೋರಾಟ!
  • ಲಿಲಿ VDHM 2024 ಹಾಗೂ TSW 25K ಕೋಲ್ಕತ್ತಾ ಮ್ಯಾರಥಾನ್ ನಲ್ಲಿ ವಿಜಯಿಯಾಗಿದ್ದಾರೆ.

ಹಾಕಿ ತಾರೆ ಮನ್ ಪ್ರೀತ್ ಸಿಂಗ್ ವಿಶೇಷ ಎಸಿಕ್ಸ್ ಫಿನಿಶರ್ ಟೀ ಶರ್ಟ್ ಅನಾವರಣಗೊಳಿಸಿದರು. ಪ್ರತಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಅಗ್ರ 1000 ಓಟಗಾರರಿಗೆ ಈ ಟೀ ಶರ್ಟ್ ನೀಡಲಾಗುತ್ತದೆ.

ಟಿಸಿಎಸ್ ಬೆಂಗಳೂರು ಮುಖ್ಯಸ್ಥ ಸುನಿಲ್ ದೇಶಪಾಂಡೆ: “TCS ವರ್ಲ್ಡ್ 10K ಕೇವಲ ಓಟವಲ್ಲ, ಅದು ಆರೋಗ್ಯ, ಸಮುದಾಯ ಹಾಗೂ ಒಗ್ಗಟ್ಟಿನ ಹಬ್ಬ!”

ಪ್ರೊಕ್ಯಾಮ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್: “ಜೋಶುವಾ ಚೆಪ್ಟೆಗಿ, ಕಿರಣ್ ಮ್ಹಾತ್ರೆ ಹಾಗೂ ಸಂಜೀವನಿ ಜಾಧವ್ ಅವರ ಉಪಸ್ಥಿತಿಯಿಂದ ಈ ಸ್ಪರ್ಧೆ ಇನ್ನಷ್ಟು ರೋಮಾಂಚಕವಾಗಲಿದೆ.”

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page