ಎಲೆಕ್ಟ್ರಿಕ್ ವಾಹನಗಳು ಹಚ್ಚಿನಿಂದಲೇ utomatic transmission ನೊಂದಿಗೆ ಮಾತ್ರ ಲಭ್ಯವಿದ್ದವು. ಇದರಿಂದಾಗಿ ಹೆಚ್ಚಿನವರು, ವಿಶೇಷವಾಗಿ ಹಿರಿಯರು, ಅವುಗಳನ್ನು ಅನುಕೂಲಕರವಾಗಿ ಬಳಸುತ್ತಿದ್ದಾರೆ. ಆದರೆ, ಕೆಲವು ಜನರು ಎಲೆಕ್ಟ್ರಿಕ್ ಕಾರುಗಳಿಗೂ ಮ್ಯಾನುವಲ್ ಗೇರ್ (Manual Gear for Electric Vehicles) ಬೇಕೆಂದು ನಿರೀಕ್ಷಿಸುತ್ತಿದ್ದರು. ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಫೋರ್ಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಸಿಸ್ಟಂ ಅನ್ನು ಎಲೆಕ್ಟ್ರಿಕ್ ಕಾರುಗಳಿಗಾಗಿ ಪರಿಚಯಿಸಲು ಪೇಟೆಂಟ್ ಪಡೆದುಕೊಂಡಿದೆ.
ಫೋರ್ಡ್ ಶೀಘ್ರದಲ್ಲೇ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳಲ್ಲಿ ರೆಟ್ರೋ ಶೈಲಿಯ ಮ್ಯಾನುವಲ್ ಶಿಫ್ಟರ್ ಅನ್ನು ಪರಿಚಯಿಸಲು ಯೋಜಿಸಿದೆ. 2023ರಲ್ಲಿ ಪೇಟೆಂಟ್ ಪಡೆದಿರುವ ಈ ತಂತ್ರಜ್ಞಾನ, ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ಮೋಟಾರ್ ವೇಗ ಮತ್ತು ಟಾರ್ಕ್ output ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಮೆರಿಕದಲ್ಲಿ ಫೋರ್ಡ್ ಕಂಪನಿಯನ್ನು ಭೇಟಿ ಮಾಡಿ, ತಮಿಳುನಾಡಿಗೆ ಪುನರಾಗಮನದ ಆಹ್ವಾನ ನೀಡಿದರು. ಫೋರ್ಡ್ ಇದನ್ನು ಸ್ವೀಕರಿಸಿದ್ದರೂ, ತಕ್ಷಣ ಭಾರತದಲ್ಲಿ ಕಾರು ಉತ್ಪಾದನೆ ಪ್ರಾರಂಭಿಸುವ ಯೋಜನೆ ಇಲ್ಲ. ತಮಿಳುನಾಡಿನ ಕಾರ್ಖಾನೆಯನ್ನು ಹೊಸ ಉತ್ಪಾದನೆಗಿಂತ, ರಫ್ತು ಕೇಂದ್ರವನ್ನಾಗಿ ಪರಿಗಣಿಸಲು ಸಾಧ್ಯವೆಂದು ಹೇಳಲಾಗಿದೆ.
ಫೋರ್ಡ್ ತಮಿಳುನಾಡಿನ ಘಟಕದಲ್ಲಿ ಪ್ರಸ್ತುತ 12,000 ಉದ್ಯೋಗಿಗಳನ್ನು ಹೊಂದಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದನ್ನು 2,500-3,000 ಹೆಚ್ಚಿಸುವ ಸಾಧ್ಯತೆಯಿದೆ. ಪ್ರತಿ ವರ್ಷ 1.50 ಲಕ್ಷ ಕಾರುಗಳು ಮತ್ತು 3.40 ಲಕ್ಷ ಎಂಜಿನ್ ಗಳ ಉತ್ಪಾದನೆ ಸಾಮರ್ಥ್ಯವಿರುವ ಈ ಘಟಕ, ಮುಂದೆಯೂ ನಿರ್ವಹಿಸಲಾಗುವ ಸಾಧ್ಯತೆ ಇದೆ. ಈ ನಿರ್ಧಾರ ಎಲೆಕ್ಟ್ರಿಕ್ ವಾಹನಗಳ ಭವಿಷ್ಯಕ್ಕೆ ಹೊಸ ತಿರುವು ನೀಡಲಿದೆ. ಫೋರ್ಡ್ ಈ ಹೊಸ ಪ್ರಯತ್ನದಿಂದ ಮ್ಯಾನುವಲ್ ಶಿಫ್ಟರ್ ಇಚ್ಛಿಸುವ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿದ್ದು, ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯ ಸೃಷ್ಟಿ ಸಾಧ್ಯ!