HomeNewsThailand Earthquake: Israeli ತಂತ್ರಜ್ಞಾನ ಜೀವ ಉಳಿಸಿತು!

Thailand Earthquake: Israeli ತಂತ್ರಜ್ಞಾನ ಜೀವ ಉಳಿಸಿತು!

- Advertisement -
- Advertisement -

ಶುಕ್ರವಾರ ಥಾಯ್ಲೆಂಡ್ ನಲ್ಲಿ ಸಂಭವಿಸಿದ ಭಾರೀ ಭೂಕಂಪ (Thailand Earthquake) ವಿಶ್ವವನ್ನು ಬೆಚ್ಚಿಬೀಳಿಸಿದೆ. ಅನೇಕ ಕಟ್ಟಡಗಳು ನೆಲಸಮವಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಇಸ್ರೇಲ್ (Israeli) ಸಹಾಯಕ್ಕೆ ಧಾವಿಸಿದೆ.

ಇಸ್ರೇಲಿ ಕಂಪನಿ ಕ್ಯಾಮೆರೊ-ಟೆಕ್ನ ತಂಡವು ಥಾಯ್ಲೆಂಡ್‌ನ ವಿಪತ್ತು ಸ್ಥಳಕ್ಕೆ ಮೊದಲ ಅಂತಾರಾಷ್ಟ್ರೀಯ ತಂಡವಾಗಿ ಆಗಮಿಸಿದೆ. ತಮ್ಮ ಉನ್ನತ ತಂತ್ರಜ್ಞಾನದಿಂದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ.

5 ಮೀಟರ್ ಆಳದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕ್ಸೇವರ್ 400 ಸಿಸ್ಟಮ್ ಉಪಯೋಗಿಸಿ ಪತ್ತೆಹಚ್ಚಿ, ರಕ್ಷಿಸಲಾಗಿದೆ. ಈ ತಂತ್ರಜ್ಞಾನ ಗೋಡೆಗಳ ಮೂಲಕ ಜೀವದ ಚಿಹ್ನೆಗಳನ್ನು ಪತ್ತೆಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾನುವಾರ ಐಡಿಎಫ್ ಹಾಗೂ ರಕ್ಷಣಾ ಸಚಿವಾಲಯದ ತಂಡ ಥಾಯ್ಲೆಂಡ್‌ಗೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಗಳಿಗೆ ಸಹಕಾರ ನೀಡಿತು. ಸ್ಥಳೀಯ ಅಧಿಕಾರಿಗಳಿಗೆ ತಾಂತ್ರಿಕ ಮಾರ್ಗದರ್ಶನ ಒದಗಿಸಿತು.

7.7 ತೀವ್ರತೆಯ ಭೂಕಂಪ ಮತ್ತು 6.4 ತೀವ್ರತೆಯ ನಂತರದ ಕಂಪನದಿಂದ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ತೀವ್ರವಾಗಿ ಪ್ರಭಾವಿತವಾಗಿದೆ. 1,644 ಮ್ಯಾನ್ಮಾರ್ ನಾಗರಿಕರು ಮತ್ತು 17 ಥಾಯ್ ನಾಗರಿಕರು ಸಾವನ್ನಪ್ಪಿದ್ದಾರೆ. ಅನೇಕ ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮ್ಯಾನ್ಮಾರ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಚೀನಾ, ರಷ್ಯಾ ಮತ್ತು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ನೆರವಿಗೆ ಮುಂದಾಗಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!