
Chikkaballapur : ಚಿಕ್ಕಬಳ್ಳಾಪುರ ನಗರಸಭೆ (Chikkaballapur Town Municipality) ಆವರಣದಲ್ಲಿ ಏಪ್ರಿಲ್ 5 ರಂದು 98 ಅಂಗಡಿ ಮಳಿಗೆಗಳ ಹರಾಜು (Re-auction) ನಡೆಯಲಿದೆ. ಆದರೆ ಈ ಹರಾಜು ಮುಂದೂಡಬಹುದು ಎಂಬ ಮಾತುಗಳು ಜನರ ಮಧ್ಯೆ ಹರಡುತ್ತಿವೆ.
ಇದಕ್ಕೆ ವಿರೋಧವಾಗಿ ಹಲವು ದಲಿತ ಸಂಘಟನೆಗಳು ಮುಂದೆ ಬಂದಿದ್ದು, “ಹರಾಜು ನಿಲ್ಲಿಸಬಾರದು. ನಿಲ್ಲಿಸಿದರೆ ದಲಿತರಿಗೆ ತೊಂದರೆ ಆಗುತ್ತದೆ. ನಾವು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿವೆ.
ಬುಧವಾರ (ಏ.3)ರಂದು ಸಂಘಟನೆಗಳ ಮುಖಂಡರು ನಗರಸಭೆ ಅಧಿಕಾರಿಗಳು, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದಾರೆ.
ಹರಾಜಿನಲ್ಲಿ ಒಂದು ಅಂಗಡಿಗೆ ಮೂವರು ಜನ ಭಾಗವಹಿಸಿದರೂ 300ಕ್ಕೂ ಹೆಚ್ಚು ಜನರು ನಗರಸಭೆಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ಗದ್ದಲ ಉಂಟಾಗದಂತೆ ನಗರಸಭೆ ಅಧ್ಯಕ್ಷ ಎ. ಗಜೇಂದ್ರ, ಉಪಾಧ್ಯಕ್ಷ ನಾಗರಾಜ್ ಹಾಗೂ ಸದಸ್ಯರು ಜಿಲ್ಲೆ ಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ, ಕೆಲ ರಾಜಕೀಯ ನಾಯಕರು ಹರಾಜು ಮುಂದೂಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. “ಏನಾದರೂ ಒಂದು ಕಾರಣ ಹೇಳಿ ಹರಾಜು ನಿಲ್ಲಿಸೋಣ” ಎಂಬ ಮಾತು ಅಧಿಕಾರಿಗಳ ನಡುವಲ್ಲಿಯೇ ಕೇಳಿಬರುತ್ತಿದೆ.
ಹಿಂದಿನ ಸಲ ಮೀಸಲಾತಿಯ ಕಾರಣದಿಂದ ಹರಾಜು ನಿಲ್ಲಿಸಲಾಗಿತ್ತು. ಈಗ ಎಲ್ಲವೂ ಸರಿಯಾಗಿದ್ದರೂ ರಾಜಕೀಯ ಕಾರಣಗಳಿಂದ ಹರಾಜಿಗೆ ತಡೆ ಹಾಕಲು ಯತ್ನ ನಡೆಯುತ್ತಿದೆ. “ಇದರಿಂದ ನಗರಸಭೆಗೆ ಲಾಭವಾಗಬೇಕಾದ್ದು ಹೋಗುತ್ತದೆ. ಜನರ ಪಾಲಿಗೆ ಇದು ನಷ್ಟವಾಗುತ್ತದೆ” ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
For Daily Updates WhatsApp ‘HI’ to 7406303366
The post ಮಳಿಗೆಗಳ ಮರು ಹರಾಜು: DSS ವತಿಯಿಂದ ಪ್ರತಿಭಟನೆ ಎಚ್ಚರಿಕೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.