ಭಾರತೀಯ ನೌಕಾಪಡೆಯ ಶಕ್ತಿಯನ್ನು ಹೆಚ್ಚಿಸಲು ಭಾರತ ಮತ್ತು ಫ್ರಾನ್ಸ್ ನಡುವೋ ಒಂದು ದೊಡ್ಡ ಯುದ್ಧವಿಮಾನ ಖರೀದಿ ಒಪ್ಪಂದ ಸಾಧ್ಯವಾಗಿದೆ. ಈ ಒಪ್ಪಂದದ ಅಡಿಯಲ್ಲಿ ಭಾರತವು ಫ್ರಾನ್ಸ್ ನಿಂದ 26 ರಫೇಲ್ ಮೆರೈನ್ (Rafale M) ಯುದ್ಧ ವಿಮಾನಗಳನ್ನು ಖರೀದಿಸಲಿದೆ. ಒಟ್ಟು ಖರ್ಚು ₹63,000 ಕೋಟಿ ರೂಪಾಯಿಗಳಷ್ಟು ಇರುವ ಸಾಧ್ಯತೆ ಇದೆ.
ಈ ವಿಮಾನಗಳಲ್ಲಿ 22 ಸಿಂಗಲ್-ಸೀಟರ್ ಮತ್ತು 4 ಡಬಲ್-ಸೀಟರ್ ಗಳು ಇರುತ್ತವೆ. ವಿಮಾನವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ದೇಶೀಯವಾಗಿ ನಿರ್ಮಿಸಲಾದ INS ವಿಕ್ರಾಂತ್ ಮೇಲೆ ಈ ವಿಮಾನಗಳು ಕಾರ್ಯನಿರ್ವಹಿಸಲಿವೆ. ಈ ಹೊಸ ವಿಮಾನಗಳು ಈಗಿರುವ ಮಿಗ್-29ಕೆ ವಿಮಾನಗಳನ್ನು ಬದಲಾಯಿಸಲಿವೆ.
2029ರ ಅಂತ್ಯದೊಳಗೆ ಮೊದಲ ಬ್ಯಾಚ್ ವಿಮಾನಗಳು ಬರಲಿದ್ದು, 2031ರ ವೇಳೆಗೆ ಎಲ್ಲಾ ವಿಮಾನಗಳ ವಿತರಣೆಯಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಒಪ್ಪಂದದಡಿಯಲ್ಲಿ ನೌಕಾಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ.
ರಫೇಲ್ ಎಂ ಎಂಬುದು ವಿಶೇಷವಾಗಿ ಕಡಲ ಕಾರ್ಯಾಚರಣೆಗಳಿಗೆ ತಯಾರಿಸಲಾದ ಯುದ್ಧವಿಮಾನವಾಗಿದೆ. ಇದು ಶಾರ್ಟ್ ಟೇಕ್-ಆಫ್ ಮತ್ತು ಅರೆಸ್ಟೆಡ್ ಲ್ಯಾಂಡಿಂಗ್ (STOBAR) ವ್ಯವಸ್ಥೆಗೆ ಹೊಂದಾಣಿಕೆಯಾಗಿದ್ದು, ನೌಕಾ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿದೆ. ಈ ಹೊಸ ಸೇರ್ಪಡೆ ಸಮುದ್ರದ ಮೇಲೆ ಭಾರತದ ಬಲವನ್ನು ಮತ್ತಷ್ಟು ಶಕ್ತಿಮತನ್ನಾಗಿ ಮಾಡುವ ಭರವಸೆ ಹೊಂದಿದೆ.