Home India Chembur ನಲ್ಲಿ Businessman ಮೇಲೆ ಗುಂಡಿನ ದಾಳಿ– ತನಿಖೆ ಮುಂದುವರಿಕೆ

Chembur ನಲ್ಲಿ Businessman ಮೇಲೆ ಗುಂಡಿನ ದಾಳಿ– ತನಿಖೆ ಮುಂದುವರಿಕೆ

57
Businessman shot dead in Chembur

Mumbai, Chembur: ಮುಂಬೈನಲ್ಲಿ ಚೆಂಬೂರಿನ (Chembur) ಡೈಮಂಡ್ ಗಾರ್ಡನ್ ಬಳಿ ಬುಧವಾರ ರಾತ್ರಿ ಭಯಾನಕ ಘಟನೆ ನಡೆದಿದೆ. ಉದ್ಯಮಿ ಸದ್ರುದ್ದೀನ್ ಖಾನ್ ಅವರ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ನಡು ರಸ್ತೆಯಲ್ಲಿಯೇ ಗುಂಡು ಹಾರಿಸಿದ್ದಾರೆ.

ಸದ್ರುದ್ದೀನ್ ಖಾನ್ ಅವರು ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿರುವಾಗ, ಡೈಮಂಡ್ ಗಾರ್ಡನ್ ಬಳಿ ಕಾದು ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡು ಹಾರಿಸಿದರು. ಈ ದಾಳಿಯಲ್ಲಿ ಖಾನ್ ಅವರಿಗೆ ಎರಡು ಗುಂಡುಗಳು ತಾಗಿವೆ. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚೆಂಬೂರು ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಫೊರೆನ್ಸಿಕ್ ತಂಡವು ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ.

ಚೆಂಬೂರಿನಲ್ಲಿ ಉದ್ಯಮಿಯ ಮೇಲೆ ನಡು ರಸ್ತೆಯಲ್ಲಿಯೇ ನಡೆದ ಗುಂಡಿನ ದಾಳಿ ಸ್ಥಳೀಯರಲ್ಲಿ ಭಯಭೀತಿಯನ್ನುಂಟುಮಾಡಿದೆ. ಘಟನೆಯ ಹಿಂದೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page