HomeNewsRCB vs PBKS: ಇಂದು ಕದನ - ಯಾವ ತಂಡ ಬಲಿಷ್ಠ?

RCB vs PBKS: ಇಂದು ಕದನ – ಯಾವ ತಂಡ ಬಲಿಷ್ಠ?

- Advertisement -
- Advertisement -


ಇಂದು IPL 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಸೇರುತ್ತಿವೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

RCB ತಂಡ: ಈ ಋತುವಿನಲ್ಲಿ ರಜತ್ ಪಟೀದಾರ್ ನೇತೃತ್ವದಲ್ಲಿ RCB ಉತ್ತಮ ಪ್ರದರ್ಶನ ನೀಡುತ್ತಿದೆ. ಆರು ಪಂದ್ಯಗಳಲ್ಲಿ 4 ಜಯ ಹಾಗೂ 2 ಸೋಲು. ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಇತ್ತೀಚೆಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

PBKS ತಂಡ: ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ 6 ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಸೋಲು ಕಂಡಿದೆ. ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 16 ರನ್ಗಳಿಂದ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಇದುವರೆಗೆ RCB ಮತ್ತು PBKS ತಂಡಗಳು 33 ಬಾರಿ ಎದುರು ಬಿದ್ದಿವೆ. RCB 16 ಬಾರಿ ಗೆದ್ದು, PBKS 17 ಬಾರಿ ಜಯಿಸಿದೆ. ಕಳೆದ 5 ಪಂದ್ಯಗಳಲ್ಲಿ RCB 3 ಬಾರಿಗೆ ಗೆದ್ದಿದ್ದು, PBKS 2 ಬಾರಿ ಗೆಲುವು ಸಾಧಿಸಿತು.

ಗರಿಷ್ಠ ಮತ್ತು ಕನಿಷ್ಠ ಸ್ಕೋರ್

  • RCB ವಿರುದ್ಧ ಪಂಜಾಬ್ 232 ರನ್ ಹಾಕಿ ಹೈಸ್ಕೋರ್ ಮಾಡಿದೆ. ಕನಿಷ್ಠ ಸ್ಕೋರ್ 88 ರನ್.
  • RCB 241 ರನ್ ಹಾಕಿ ಪಂಜಾಬ್ ವಿರುದ್ಧ ಹೈಸ್ಕೋರ್ ಮಾಡಿದೆ. ಕನಿಷ್ಠ ಸ್ಕೋರ್ 84 ರನ್.

RCB: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್ವುಡ್, ಯಶ್ ದಯಾಲ್.

PBKS: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಸೂರ್ಯಾಂಶ್ ಶೆಡ್ಜ್.

ಪಂದ್ಯದ ಸಮಯ ಮತ್ತು ನೇರಪ್ರಸಾರ

ಪಂದ್ಯ ಪ್ರಾರಂಭ: ರಾತ್ರಿ 7.30 ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್ಸ್ಟಾರ್.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!