Bengaluru: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ (Yashaswini Health Care Scheme) ದರ ಪರಿಷ್ಕರಣೆ ಮಾಡಲಾಗಿದೆ. 69 ಹೊಸ ಚಿಕಿತ್ಸೆಯನ್ನು ಸೇರಿಸಿ, ಒಟ್ಟು 2,191 ಚಿಕಿತ್ಸೆಯನ್ನು ಅಂತಿಮಗೊಳಿಸಲಾಗಿದೆ.
ಯಶಸ್ವಿನಿ ಯೋಜನೆಯ ದರ ಪರಿಷ್ಕರಣೆ ಕುರಿತು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಿ, ಅದರ ಶಿಫಾರಸ್ಸುಗಳನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದ್ದಾರೆ. 2022-23 ರಿಂದ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ.
ಈ ಪರಿಷ್ಕರಣೆಯ ಪ್ರಮುಖ ಉದ್ದೇಶವೆಂದರೆ, 2017-18ರಲ್ಲಿ ನಿಗದಿಪಡಿಸಿದ ದರಗಳು ಪ್ರಸ್ತುತ ಮಾರುಕಟ್ಟೆ ದರಗಳಿಗಿಂತ ಕಡಿಮೆ ಆಗಿರುವುದರಿಂದ, ಪ್ರಮುಖ ಆಸ್ಪತ್ರೆಗಳು ಈ ಯೋಜನೆಯಡಿ ಸೇರಲು ಮುಂದೆ ಬರುತ್ತಿಲ್ಲ.
ಹೆಚ್ಚು ಅನಕೂಲವನ್ನು ನೀಡಲು, 69 ಹೊಸ ಚಿಕಿತ್ಸೆಯನ್ನು ಹಾಗೂ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ದರಗಳನ್ನು ಪರಿಷ್ಕರಿಸಲಾಗಿದ್ದು, ಸಮಿತಿಯಲ್ಲಿ ತಜ್ಞ ವೈದ್ಯರಿಂದ ಸಲಹೆಗಳನ್ನು ಪಡೆದು ಈ ಪರಿಷ್ಕರಣೆ ಮಾಡಲಾಗಿದೆ.
ಇತ್ತೀಚೆಗೆ, Interventional Radiology, CTVS, ಮತ್ತು ಕ್ಯಾನ್ಸರ್ ಕಾಯಿಲೆಗಳಂತಹ ಹೊಸ ಚಿಕಿತ್ಸೆಗಳ ಪೈಕಿ ಸಹಕಾರಿಗಳಿಗೆ/ ರೈತಾಪಿ ವರ್ಗಕ್ಕೆ 69 ಹೊಸ ಚಿಕಿತ್ಸೆಗಳು ಸೇರಿವೆ.
2024-25ರಲ್ಲಿ 68,159 ಫಲಾನುಭವಿಗಳು ರೂ. 117.79 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದು, ಸರಾಸರಿ ಪ್ರತಿ ಚಿಕಿತ್ಸೆಗೆ ರೂ. 17,000 ವೆಚ್ಚವಾಗಿದೆ. ಮುಂದಿನ ವರ್ಷಕ್ಕೆ 75,000 ಫಲಾನುಭವಿಗಳು ನಿರೀಕ್ಷಿತರಾಗಿದ್ದು, ರೂ. 127.50 ಕೋಟಿ ವೆಚ್ಚವಾಗಲಿದೆ.
ಹೆಚ್ಚಿದ ವೆಚ್ಚವನ್ನು ಸರಕಾರವು ಹೆಚ್ಚುವರಿ ಅನುದಾನದಿಂದ ಭರಿಸುಮುಖವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.