back to top
24 C
Bengaluru
Saturday, August 30, 2025
HomeEntertainmentಅಪ್ಪು ಕನಸು ಸಾಕಾರ: Ashwini Puneeth Rajkumar ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ

ಅಪ್ಪು ಕನಸು ಸಾಕಾರ: Ashwini Puneeth Rajkumar ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯ

- Advertisement -
- Advertisement -

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ‘ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್’ (Junior Toes International Preschool) ಪ್ರಾರಂಭಿಸಿದ್ದು, ಅವರಿಗೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಮತ್ತು ಶ್ರುತಿ ಕಿರಣ್ ಜೊತೆಯಾಗಿದ್ದಾರೆ.

ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಟೀಸರ್ ಬಿಡುಗಡೆ ಸಮಾರಂಭ ನಡೆದಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಲಾಂಚ್ ಮಾಡಿದ್ದಾರೆ. ನಟಿ ಮಿಲನಾ ನಾಗರಾಜ್ ವಿಶೇಷ ಅತಿಥಿಯಾಗಿ ಪಾಲ್ಗೊಂಡರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಮೈಸೂರಿನಲ್ಲಿ ಸೇರಿದಂತೆ 12 ಕೇಂದ್ರಗಳನ್ನು ಆರಂಭಿಸಿರುವ ಬಗ್ಗೆ ತಿಳಿಸಿದರು. ಮಕ್ಕಳ ಕಲಿಕೆಗೆ ಜೊತೆಗೆ ಅವರ ವೈಯಕ್ತಿಕ ಸಾಮರ್ಥ್ಯವನ್ನು ಬೆಳೆಸುವುದು ಶಾಲೆಯ ಮುಖ್ಯ ಉದ್ದೇಶ ಎಂದರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, 20 ವರ್ಷಗಳಿಂದ ಪುನೀತ್ ರಾಜ್‌ಕುಮಾರ್ ಅವರ ಜೊತೆ ಶಿಕ್ಷಣ ಕ್ಷೇತ್ರಕ್ಕೆ ಬರಬೇಕೆಂಬ ಕನಸು ಕಂಡಿದ್ದನ್ನು ಇಲ್ಲಿ ಹಂಚಿಕೊಂಡರು. ನಟಿ ಮಿಲನಾ ನಾಗರಾಜ್, ಶಾಲೆಯ ಹೆಸರು ಮುದ್ದಾಗಿದ್ದು, ಮಕ್ಕಳಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.

ಸ್ಫೂರ್ತಿ ವಿಶ್ವಾಸ್ ಅವರು, ಅಪ್ಪು ಸರ್ ಹೆಸರನ್ನು ಉಳಿಸಲು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು. ಸುನೀತಾ ಗೌಡ ಅವರು, ಪ್ರತಿ ಮಗುವಿಗೆ ಧೈರ್ಯ, ಸೃಜನಾತ್ಮಕತೆ ಮತ್ತು ಆತ್ಮವಿಶ್ವಾಸ ಬೆಳೆಸುವುದರ ಕಡೆ ಗಮನ ಹರಿಸುತ್ತೇವೆ ಎಂದು ಹೇಳಿದರು.

ಜೂನಿಯಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಡಾ. ಬಿಂದು ರಾಣಾ ಅವರ ಪಠ್ಯಕ್ರಮದೊಂದಿಗೆ ಶಾಲೆ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಜ್ಜಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ತಂಡ, ಮಕ್ಕಳಲ್ಲಿ ಬಾಲ್ಯದಿಂದಲೇ ನಾಯಕತ್ವ ಮತ್ತು ಉದ್ಯಮಶೀಲ ಚಿಂತನೆ ಬೆಳೆಸುವ ಗುರಿಯನ್ನು ಹೊಂದಿದ್ದಾರೆ.

ಈ ಶಾಲೆ ಈಗ ಬೆಂಗಳೂರು ಮತ್ತು ಮೈಸೂರಿನಲ್ಲಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದೆಲ್ಲೆಡೆ ವಿಸ್ತರಿಸುವ ಯೋಜನೆ ಹೊಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page