HomeBusinessIndia-France Deal: ನೌಕಾಪಡೆಗೆ 26 Rafale ಯುದ್ಧ ವಿಮಾನಗಳು

India-France Deal: ನೌಕಾಪಡೆಗೆ 26 Rafale ಯುದ್ಧ ವಿಮಾನಗಳು

- Advertisement -
- Advertisement -

New Delhi: ಫ್ರಾನ್ಸ್‌ನ ರಫೇಲ್ ಯುದ್ಧವಿಮಾನಗಳು ಇನ್ನು ಹೆಚ್ಚಾಗಿ ಭಾರತದ ನೌಕಾಪಡೆಯ ಭಾಗವಾಗಲು ಮುಂದಾಗಿವೆ. ಭಾರತ ಮತ್ತು ಫ್ರಾನ್ಸ್ ಸರ್ಕಾರಗಳು 26 ರಫೇಲ್ ಜೆಟ್ ಗಳನ್ನು ನೀಡಲು ಒಪ್ಪಂದ (India-France Deal) ಮಾಡಿಕೊಂಡಿವೆ, ಇದಕ್ಕೆ 64,000 ಕೋಟಿ ರೂ. ಮೌಲ್ಯವಾಗಿದೆ. ಭಾರತದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಈ ಒಪ್ಪಂದವನ್ನು ಭಾರತ-ಫ್ರಾನ್ಸ್ ಸರ್ಕಾರಗಳು ಆನ್ಲೈನ್‌ನಲ್ಲಿ ಸಂವಿಧಾನಿತ ಮಾಡಿದರು.

ಭಾರತದ ನೌಕಾಪಡೆಗೆ ಅಗತ್ಯವಿರುವ ಯುದ್ಧವಿಮಾನಗಳ ಅವಲೋಕನ ನಡೆಸಿದ ಬಳಿಕ, ಅಮೆರಿಕದ ಬೋಯಿಂಗ್ ಎಫ್/ಎ18 ಸೂಪರ್ ಹಾರ್ನೆಟ್ ಮತ್ತು ಫ್ರಾನ್ಸ್‌ನ ರಫೇಲ್ ವಿಮಾನಗಳ ನಡುವಣ ಆಯ್ಕೆ ಮಾಡಿಕೊಂಡು, ರಫೇಲ್ ಜೆಟ್‌ಗಳು ಆಯ್ಕೆಗೊಳ್ಳುತ್ತವೆ ಎಂದು ನಿರ್ಧಾರ ಕೈಗೊಳ್ಳಲಾಗಿದೆ.

ಇದಲ್ಲದೇ, ಭಾರತ ಈಗಾಗಲೇ 36 ರಫೇಲ್ ವಿಮಾನಗಳನ್ನು ವಾಯುಪಡೆಯೊಂದಿಗೆ ಹೊಂದಿದೆ, ಮತ್ತು ಈಗ ನೌಕಾಪಡೆಗೂ ರಫೇಲ್ ಯುದ್ಧವಿಮಾನಗಳು ಸೇರಲಿವೆ. ಭವಿಷ್ಯದಲ್ಲಿ ರಫೇಲ್ ವಿಮಾನಗಳು ಭದ್ರತೆಯ ದೃಷ್ಟಿಯಿಂದ ಅತ್ಯಗತ್ಯವಾಗಿವೆ.

ಭಾರತದ ನೌಕಾಪಡೆಯಲ್ಲಿರುವ ಸಮರನೌಕೆಗಳಾದ ಐಎನ್​​ಎಸ್ ವಿಕ್ರಮಾದಿತ್ಯ ಮತ್ತು ಐಎನ್​​ಎಸ್ ವಿಕ್ರಾಂತ್ ಬಳಿ ಸದ್ಯ ಮಿಗ್ 29ಕೆ ಫೈಟರ್ ಜೆಟ್​​ಗಳಿವೆ. ಆದರೆ, ಇವುಗಳು ಮೊದಲಿನಂತೆ ಕ್ಷಮತೆ ಹೊಂದಿಲ್ಲ. ಮೈಂಟೆನೆನ್ಸ್ ಸಮಸ್ಯೆ ಈ ಮಿಗ್ ವಿಮಾನಗಳಲ್ಲಿವೆ. ಹೀಗಾಗಿ, ಹೊಸ ತಲೆಮಾರಿನ ಫೈಟರ್ ಜೆಟ್ ಅವಶ್ಯಕತೆ ಇತ್ತು. ಈಗ ರಫೇಲ್ ಎಂ ಏರ್​​ಕ್ರಾಫ್ಟ್​​​ಗಳು ಮಿಗ್ 29ಕೆ ಸ್ಥಾನ ತುಂಬಲಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!