Kenya: ವಕೀಲರ ವೃತ್ತಿಯಲ್ಲಿ ಬುದ್ಧಿವಂತಿಕೆಯಿಂದ ಮಾಡಿದ ಜಯಗಳ ಬಗ್ಗೆ ಅನೇಕ ಕಥೆಗಳು ಹೇಳಲ್ಪಟ್ಟಿವೆ. ಆದರೆ ಕೀನ್ಯಾದ ಬ್ರಿಯನ್ ಮೆಂಡ (Lawyer Brian Menda) ಎಂಬ ವ್ಯಕ್ತಿಯು 27 ಪ್ರಕರಣಗಳನ್ನು ಗೆದ್ದು, ವಕೀಲರಿಗೂ ಆಶ್ಚರ್ಯವನ್ನೇ ತಂದಿದ್ದಾರೆ.
ಈ ವ್ಯಕ್ತಿ ನಿಜವಾದ ವಕೀಲನಲ್ಲ, ಆದರೆ ತನ್ನ ಚಾಣಕ್ಯ ಚಾತುರ್ಯದಿಂದ 27 ಕೇಸ್ ಗಳನ್ನು ಜಯಿಸಿದನು. ಈತನ ಹೆಸರು ಬ್ರಿಯನ್ ಮೆಂಡ ಎಂದು ಗುರುತಿಸಲಾಗಿದೆ, ಮತ್ತು ಕೀನ್ಯಾದಲ್ಲಿ ಈ ಘಟನೆ ನಡೆದಿದೆ.
ಈತನ ವಿರುದ್ಧ ಪ್ರಕರಣ ದಾಖಲಾಗಿದಾಗ, ಆತನು ತನ್ನ ಬುದ್ಧಿವಂತಿಕೆಯಿಂದ ಹಾಗು ತಂತ್ರದೊಂದಿಗೆ ತನ್ನ ಮೇಲೆ ಹಾಕಲಾದ ಕೇಸ್ ವಿರುದ್ಧ ಯಶಸ್ವಿಯಾಗಿ ವಾದಿಸಿದ್ದಾನೆ.
ಯಾವುದೇ ಕಾನೂನು ಪದವಿ ಪಡೆಯದಿದ್ದರೂ ಕೂಡ ತನ್ನ ಚಾಣಚಕ್ಯತೆ ಹಾಗೂ ಬುದ್ಧಿವಂತಿಕೆಯಿಂದ ಒಟ್ಟಾರೆ 27 ಪ್ರಕರಣಗಳನ್ನು ವಾದಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.