back to top
23.7 C
Bengaluru
Tuesday, November 25, 2025
HomeKarnatakaChikkaballapuraನಂದಿಬೆಟ್ಟದ ತಪ್ಪಲಿನಲ್ಲಿ ‘ಹಸಿರು ಯೋಗ’

ನಂದಿಬೆಟ್ಟದ ತಪ್ಪಲಿನಲ್ಲಿ ‘ಹಸಿರು ಯೋಗ’

- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾರಹಳ್ಳಿ ಸಮೀಪದ ನಂದಿಬೆಟ್ಟದ ಸುಂದರ ತಪ್ಪಲಿನಲ್ಲಿ, ಆಯುಷ್ ಇಲಾಖೆಯ ಸಹಯೋಗದಲ್ಲಿ ಶನಿವಾರದಂದು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ‘ಹಸಿರು ಯೋಗ’ ದಿನವನ್ನು ಉತ್ಸವಮಯವಾಗಿ ಆಚರಿಸಲಾಯಿತು.

ಸೂರ್ಯೋದಯದ ತಾಜಾ ಗಾಳಿಯಲ್ಲಿ ನೂರಾರು ಯೋಗಪಟುಗಳು ವಿವಿಧ ಯೋಗಾಸನಗಳನ್ನು ಮಾಡಿ ಆರೋಗ್ಯದ ಮಹತ್ವವನ್ನು ಸಾರಿದರು. ಜೂನ್ 21ರಂದು ನಡೆಯಲಿರುವ ಯೋಗ ದಿನಾಚರಣೆಗೆ ಮುನ್ನ, ಒಂದು ತಿಂಗಳ ಕಾಲ ‘ಪರಿಸರ ಸ್ನೇಹಿ ಕ್ರಮ’ ಮತ್ತು ‘ಹಸಿರು ಯೋಗ’ದ ಕುರಿತು ಜಾಗೃತಿ ಅಭಿಯಾನಕ್ಕೆ ಶುಭಾರಂಭ ನೀಡಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಪ್ರೇರಣಾತ್ಮಕ ಹವಾಮಾನ ಸೃಷ್ಟಿಸಲಾಯಿತು. ಜೊತೆಗೆ, ಶ್ಯೂನ ತ್ಯಾಜ್ಯ ನಿರ್ವಹಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಯೋಗ ದಿನಾಚರಣೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಮಾಜಸೇವಕಿ ಡಾ. ಸಂಜನಾ ಜಾನ್, ಮಾಜಿ ಕುಲಪತಿ ಡಾ. ವೇಣುಗೋಪಾಲ್, ಕ್ರೀಡಾಪಟು ಮಂಜುನಾಥ್ ಹೆಗ್ಡೆ, ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕಿರಣ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page