back to top
20.2 C
Bengaluru
Saturday, August 30, 2025
HomeNewsIPL ಪಂದ್ಯ Bengaluruನಲ್ಲಿ ರದ್ದು – ಫೈನಲ್ ಪಂದ್ಯ Ahmedabad ನಲ್ಲಿ ನಡೆಯಲಿದೆ

IPL ಪಂದ್ಯ Bengaluruನಲ್ಲಿ ರದ್ದು – ಫೈನಲ್ ಪಂದ್ಯ Ahmedabad ನಲ್ಲಿ ನಡೆಯಲಿದೆ

- Advertisement -
- Advertisement -

Bengaluru: IPL ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದೆ. ಆದರೆ ಮಳೆಯ ಅಡಚಣೆಯಿಂದಾಗಿ ಕೋಲ್ಕತ್ತಾ ವಿರುದ್ಧದ ಪಂದ್ಯ ರದ್ದಾದ ಬಳಿಕ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 23 ರಂದು ನಡೆಯಬೇಕಿದ್ದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯವೂ ರದ್ದಾಗಿದೆ.

ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಪಂದ್ಯವನ್ನು ಉತ್ತರ ಪ್ರದೇಶದ ಲಖನೌನಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಗೆ ಟ್ವೆಂಟಿ20 ವಿದಾಯದ ವೇಳೆ ಸಮ್ಮಾನಿಸುವ ಅವಕಾಶಕ್ಕಾಗಿ ಕಾಯುತ್ತಿದ್ದ ಬೆಂಗಳೂರಿನ ಅಭಿಮಾನಿಗಳು ನಿರಾಶರಾಗಿದ್ದಾರೆ.

ಪ್ಲೇಆಫ್ ಪಂದ್ಯಗಳಿಗೆ ಹೊಸ ಸ್ಥಳ

ಬಿಸಿಸಿಐ ಇದೀಗ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ಸ್ಥಳಗಳನ್ನು ಘೋಷಿಸಿದೆ.

  • ಮೇ 29: ಕ್ವಾಲಿಫೈಯರ್-1 – ಚಂಡೀಗಢ
  • ಮೇ 30: ಎಲಿಮಿನೇಟರ್ – ಚಂಡೀಗಢ
  • ಜೂನ್ 1: ಕ್ವಾಲಿಫೈಯರ್-2 – ಅಹಮದಾಬಾದ್
  • ಜೂನ್ 3: ಫೈನಲ್ ಪಂದ್ಯ – ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ.

ಮಳೆಯ ಕಾರಣದಿಂದ ಹೈದರಾಬಾದ್ ಮತ್ತು ಕೋಲ್ಕತ್ತಾ ಕ್ರೀಡಾಂಗಣಗಳಿಂದ ಪಂದ್ಯಗಳನ್ನು ಚಂಡೀಗಢ ಮತ್ತು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.

ಈವರೆಗೆ ಗಜರಾತ್ ಟೈಟಾನ್ಸ್, RCB ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್ ಹಂತಕ್ಕೇರಿವೆ. ಉಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಎರಡು ತಂಡಗಳ ನಡುವಿನ ನಿರ್ಣಾಯಕ ಪಂದ್ಯ ಮೇ 21 ರಂದು ನಡೆಯಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page