back to top
22.5 C
Bengaluru
Wednesday, September 17, 2025
HomeAutoಭಾರತದ ರಸ್ತೆ ಮೇಲೆ Hyundai ಸಿಂಹದ ಕಾಲು: 26 ಹೊಸ ಕಾರುಗಳ ಭರ್ಜರಿ ಪ್ರವೇಶ!

ಭಾರತದ ರಸ್ತೆ ಮೇಲೆ Hyundai ಸಿಂಹದ ಕಾಲು: 26 ಹೊಸ ಕಾರುಗಳ ಭರ್ಜರಿ ಪ್ರವೇಶ!

- Advertisement -
- Advertisement -


ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಹುಂಡೈ ಇಂಡಿಯಾ, (Hyundai) ಮುಂದಿನ 5 ವರ್ಷಗಳಲ್ಲಿ ಒಟ್ಟು 26 ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಮಹತ್ತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದೆ. ಇದು ಕಾರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ.

26 ಕಾರುಗಳಲ್ಲಿ ಏನು ಏನು ಇದೆ?

  • 20 ಐಸ್ (ICE) ಕಾರುಗಳು – ಪೆಟ್ರೋಲ್/ಡೀಸೆಲ್ ಚಾಲಿತ
  • 6 ಎಲೆಕ್ಟ್ರಿಕ್ ಕಾರುಗಳು (EV)

ಈ ಕಾರುಗಳಲ್ಲಿ ಕೆಲವು ಸಂಪೂರ್ಣ ಹೊಸ ಮಾದರಿಗಳಾಗಿದ್ದರೆ, ಇನ್ನು ಕೆಲವು ಕಾರುಗಳು ಮರುರಚನೆಯಾದ ಅಥವಾ ಸುಧಾರಿತ ಆವೃತ್ತಿಗಳಾಗಿವೆ.

“2030ರೊಳಗೆ 26 ಕಾರುಗಳನ್ನು ಬಿಡುಗಡೆ ಮಾಡುವ ನಮ್ಮ ಗುರಿ ಇದೆ. ಇದರಲ್ಲಿ ಹೊಸ ಮಾದರಿಗಳು, ಮರು ವಿನ್ಯಾಸಗೊಳಿಸಲಾದ ಕಾರುಗಳು ಮತ್ತು ಹೊಸ ತಂತ್ರಜ್ಞಾನದ ಕಾರುಗಳು ಸೇರಿವೆ.” ಎಂದು ಹುಂಡೈ ಮೋಟಾರ್ ಇಂಡಿಯಾದ MD ಮತ್ತು CEO ಅನ್ಸೂ ಕಿಮ್ ಅವರು ಹೇಳಿದರು.

“ನಾವು ಶೀಘ್ರದಲ್ಲೇ ಬಲಿಷ್ಠ ಹೈಬ್ರಿಡ್ ಕಾರುಗಳನ್ನು ತರುತ್ತಿದ್ದೇವೆ.” ಹುಂಡೈ ಹೈಬ್ರಿಡ್ ಕಾರುಗಳನ್ನು ಪರಿಚಯಿಸುವುದಾಗಿ ಕೂಡ ಘೋಷಿಸಿದೆ ಎಂದು ಕಂಪನಿಯ ಸಿಒಒ ತರುಣ್ ಗರ್ಗ್ ಅವರು ಹೇಳಿದರು

ಈ ಯೋಜನೆಯ ಪರಿಣಾಮ ಏನು?

  • ಮಾರುಕಟ್ಟೆಯಲ್ಲಿ ಹುಂಡೈನ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ
  • ಗ್ರಾಹಕರ ಗಮನ ಸೆಳೆಯಲು ಇದು ದೊಡ್ಡ ಹೆಜ್ಜೆಯಾಗಲಿದೆ
  • ಟಾಟಾ ಮತ್ತು ಮಹೀಂದ್ರಾ ಕಂಪನಿಗಳ ಪ್ರತಿಸ್ಪರ್ಧೆಗೆ ಉತ್ತೇಜನವಾಗಲಿದೆ
  • SUV ಮತ್ತು EV ಸೆಗ್ಮೆಂಟ್‌ನಲ್ಲಿ ಹೆಚ್ಚು ಬೆಳವಣಿಗೆ ಸಾಧ್ಯವಾಗಲಿದೆ

ಯಾವ ಕಾರುಗಳು ಬರಲಿವೆ?

  • ಮುಂದಿನ ಪೀಳಿಗೆಯ ಹುಂಡೈ ವೆನ್ಯೂ
  • ಮೂರನೇ ಪೀಳಿಗೆಯ ಹುಂಡೈ ಕ್ರೆಟಾ
  • ಹುಂಡೈ ಅಲ್ಕಾಜರ್, ಹುಂಡೈ ಟಕ್ಸನ್ ನಡುವೆ ಹೊಸ ಹೈಬ್ರಿಡ್ SUV
  • ಹುಂಡೈ ಐಒನಿಕ್ 5 ನ ಹೊಸ ಆವೃತ್ತಿ

ಹುಂಡೈ ಭಾರತದಲ್ಲಿ ತನ್ನ ದೊಡ್ಡ ಉದ್ದೇಶದೊಂದಿಗೆ, ವಿವಿಧ ಸೆಗ್ಮೆಂಟ್ ಮತ್ತು ಬೆಲೆಯ ಕಾರುಗಳನ್ನು ಪರಿಚಯಿಸುತ್ತಿದೆ. ಇದು ಭಾರತೀಯ ಮಾರುಕಟ್ಟೆಗೆ ಕಂಪನಿಯ ಬದ್ಧತೆಯ ಸ್ಪಷ್ಟ ಸಾಕ್ಷಿಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page