back to top
23.3 C
Bengaluru
Friday, June 6, 2025
HomeNewsIPL 2025: Lucknow ಗೆ ಭರ್ಜರಿ ಗೆಲುವು – RCB ಗೆ ಸಿಕ್ಕಿತು ಗುಡ್​ನ್ಯೂಸ್!

IPL 2025: Lucknow ಗೆ ಭರ್ಜರಿ ಗೆಲುವು – RCB ಗೆ ಸಿಕ್ಕಿತು ಗುಡ್​ನ್ಯೂಸ್!

- Advertisement -
- Advertisement -

IPL 2025ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯವನ್ನು ಸಾಧಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋ ನೀಡಿದ್ದ 235 ರನ್ ಗುರಿಯನ್ನು ಬೆನ್ನತ್ತಿದ ಗುಜರಾತ್ ತಂಡ ಆರಂಭದಲ್ಲಿ ಚೆನ್ನಾಗಿ ಆಡಿದರೂ ಮದ್ಯದಲ್ಲಿ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಸಾಯಿ ಸುದರ್ಶನ್ (21) ಮತ್ತು ಶುಭಮನ್ ಗಿಲ್ (35) ಔಟ್ ಆದರು. ಶಾರುಖ್ ಖಾನ್ ಉತ್ತಮವಾಗಿ (57 ರನ್) ಆಡಿದರೂ ತಂಡವನ್ನು ಗೆಲುವಿಗೆ ಕರೆದೊಯ್ಯಲಾಗಲಿಲ್ಲ. ಕೊನೆಗೆ ಗುಜರಾತ್ 33 ರನ್ ಗಳಿಂದ ಸೋಲಾಯಿತು. ಲಕ್ನೋ ಪರ ವಿಲಿಯಂ ಓರೂರ್ಕಿ ಮೂರು ವಿಕೆಟ್ ಪಡೆದು ಮಿಂಚಿದರು.

ಲಕ್ನೋ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ ಸ್ಕೋರ್ ಹೂಡಿತು. ಆರಂಭಿಕರು ಮಾಕ್ರಮ್ (36) ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು. ಬಳಿಕ ನಿಕೋಲಸ್ ಪೂರನ್ (56*) ಮತ್ತು ಮಾರ್ಷ್ (117) ಅಬ್ಬರದ ಬ್ಯಾಟಿಂಗ್ ಆಡಿದರು. ಇವರ ಆಧಾರದ ಮೇಲೆ ಲಕ್ನೋ ದೊಡ್ಡ ಮೊತ್ತ ಕಲೆಹಾಕಿ ಗೆಲುವಿನತ್ತ ಮುನ್ನಡೆಯಿತು.

ಲಕ್ನೋಗೆ ಜಯ ಸಿಕ್ಕಿದ್ದು RCB ಗೆ ಸುವರ್ಣಾವಕಾಶ ತಂದುಕೊಟ್ಟಿದೆ. ಲೀಗ್ ಹಂತದಲ್ಲಿ ಆರ್ಸಿಬಿಗೆ ಇನ್ನೂ ಎರಡು ಪಂದ್ಯಗಳು ಬಾಕಿಯಿದ್ದು, ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ವಿರುದ್ಧ ಆಡಬೇಕಿದೆ. ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, RCB ಅಗ್ರ ಎರಡೂ ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಬಹುದು. ಇದರಿಂದ ನೇರವಾಗಿ ಫೈನಲ್ ತಲುಪುವ ಅವಕಾಶ ಸಿಗಬಹುದು ಅಥವಾ ಕನಿಷ್ಠ ಇನ್ನೊಂದು ಅವಕಾಶ ಖಚಿತವಾಗುತ್ತದೆ.

ಈಗಾಗಲೇ RCB 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇಂದಿನ ಲಕ್ನೋ ಗೆಲುವು RCB ಗೆ ಭವಿಷ್ಯದ ಭರವಸೆ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page