Search
WhatsApp alerts

Home › Sidlaghatta

ಸುಟ್ಟುಹೋಗಿರುವ ವಿದ್ಯುತ್ ಚಾಲಿತ ಕಾರು

administrator · Published

Muttur, sidlaghatta : ತಾಲ್ಲೂಕಿನ ಮುತ್ತೂರು-ಮೇಲೂರು ಗ್ರಾಮದ ಮಾರ್ಗ ಮಧ್ಯದ ರಸ್ತೆ ಪಕ್ಕದಲ್ಲಿ ಬ್ಯಾಟರಿ ಚಾಲಿತ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಯಶವಂತಪುರದ ಶ್ರೀಹರಿ ಎನ್ನುವವರಿಗೆ ಸೇರಿದ ಬ್ಯಾಟರಿ ಚಾಲಿತ ಕಾರು ಶಾರ್ಟ್ ಸರ್ಕೂಟ್‌ನಿಂದ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.

ಶ್ರೀಹರಿಯು ಕಂಬದಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ದಾರಿ ಮಧ್ಯೆ ನಿಂತು ಹೋಗಿದೆ. ಕತ್ತಲೆ ಆದ ಕಾರಣ ಬೆಳಗ್ಗೆ ರಿಪೇರಿ ಮಾಡಿಸಿದರೆ ಆಯ್ತು ಎಂದು ತೀರ್ಮಾನಿಸಿ ಕಾರನ್ನು ಅಲ್ಲೇ ಬಿಟ್ಟು ಬೇರೊಂದು ವಾಹನದಲ್ಲಿ ಕಂಬದಹಳ್ಳಿಗೆ ತೆರಳಿದ್ದಾರೆ. ಬೆಳಗ್ಗೆ ಬಂದು ನೋಡಿದಾಗ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

For Daily Updates WhatsApp ‘HI’ to 7406303366

Read next

ಪೌರಕಾರ್ಮಿಕರೊಂದಿಗೆ ನೇರ ಸಂವಾದ: ನವೆಂಬರ್ 18ರಂದು ಸಫಾಯಿ ಕರ್ಮಚಾರಿ ಆಯೋಗದ ಭೇಟಿ

ಗೌರಿಬಿದನೂರು ತಾಲ್ಲೂಕು ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ: ಡಿಸೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸಿ

ಚಿಕ್ಕಬಳ್ಳಾಪುರ ತಾಲ್ಲೂಕು ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ: ಡಿಸೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸಿ

ಬಾಗೇಪಲ್ಲಿ ತಾಲ್ಲೂಕು ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ: ಡಿಸೆಂಬರ್ 3ರೊಳಗೆ ಆಕ್ಷೇಪಣೆ ಸಲ್ಲಿಸಿ

You cannot copy content of this page