Washington: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ನಡುವಿನ ಗುದ್ದಾಟ ಕಳೆದ ಕೆಲ ದಿನಗಳಿಂದ ಸುದ್ದಿಯಾಗಿತ್ತು. ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ವಿರುದ್ಧ ಟೀಕಾತ್ಮಕ ಪೋಸ್ಟುಗಳನ್ನು ಹಾಕಿದ್ದರು, ಇದಕ್ಕೆ ಪ್ರತಿಯಾಗಿ ಟ್ರಂಪ್ ಕೂಡ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಇತ್ತೀಚೆಗೆ ಮಸ್ಕ್ ತಮ್ಮ ಹಳೆಯ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಹೊಸದಾಗಿ ಪೋಸ್ಟ್ ಹಂಚಿಕೊಂಡ ಮಸ್ಕ್, “ಕಳೆದ ವಾರ ಟ್ರಂಪ್ ಬಗ್ಗೆ ಹಾಕಿದ ಕೆಲವು ಪೋಸ್ಟ್ಗಳಿಗೆ ನಾನು ವಿಷಾದಿಸುತ್ತೇನೆ. ವಿಷಯಗಳು ಹದಗೆಟ್ಟಿದವು,” ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು ಮಸ್ಕ್, “ನಾನು ಇಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರೆಂದು,” ಎಂಬ ಗಂಭೀರ ಟೀಕೆ ಮಾಡಿದ್ದರು. ಜೊತೆಗೆ ಟ್ರಂಪ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು.
ಈ ಟೀಕೆಗಳಿಗೆ ತೀವ್ರ ಕಿಡಿಕಾರಿದ ಟ್ರಂಪ್, ಮಸ್ಕ್ ಕಂಪನಿಗಳಿಗೆ ನೀಡಲಾಗುತ್ತಿದ್ದ ಸರ್ಕಾರಿ ಸಬ್ಸಿಡಿ ಮತ್ತು ಒಪ್ಪಂದಗಳನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿದ್ದಾರೆ. “ನಾನು ಎಲಾನ್ ಮಸ್ಕ್ಗೆ ತುಂಬಾ ಸಹಾಯ ಮಾಡಿದ್ದೇನೆ. ಆದರೆ ಈಗ ನಮ್ಮ ನಡುವಿನ ಸಂಬಂಧ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಿಲ್ಲ,” ಎಂದು ಹೇಳಿದರು.

For Daily Updates WhatsApp ‘HI’ to 7406303366
ಇದರ ನಡುವೆ ಲಾಸ್ ಏಂಜಲೀಸ್ನಲ್ಲಿರುವ ಅಕ್ರಮ ವಲಸಿಗರ ವಿಚಾರವಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ, ಟ್ರಂಪ್ 2000 ರಾಷ್ಟ್ರೀಯ ಗಾರ್ಡ್ ಗಳನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಕ್ಯಾಲಿಫೋರ್ನಿಯಾ ಗವರ್ನರ್ ಮತ್ತು ಲಾಸ್ ಏಂಜಲೀಸ್ ಮೇಯರ್ರನ್ನು ಕೂಡ ಕ್ಷಮೆ ಕೇಳುವಂತೆ ಅವರು ಕೇಳಿದ್ದಾರೆ.







