back to top
25.2 C
Bengaluru
Wednesday, October 8, 2025
HomeIndiaAhmedabad Plane Crash: Former CM Rupani ಸೇರಿದಂತೆ 265 ಮಂದಿ ದುರ್ಮರಣ

Ahmedabad Plane Crash: Former CM Rupani ಸೇರಿದಂತೆ 265 ಮಂದಿ ದುರ್ಮರಣ

- Advertisement -
- Advertisement -

ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ, (Ahmedabad plane crash) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಅಹಮದಾಬಾದಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಅಪಘಾತದ ಸ್ಥಳ ಹಾಗೂ ಸಿವಿಲ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ.

ಮಾಜಿ ಸಿಎಂ ರೂಪಾನಿಗೆ ಅಂತಿಮ ನಮನ: ಈ ಅಪಘಾತದಲ್ಲಿ ಮೃತಪಟ್ಟ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ಪ್ರಧಾನಿ ಮೋದಿ ಅಂತಿಮ ನಮನ ಸಲ್ಲಿಸಲಿದ್ದಾರೆ. ಬಳಿಕ ಕೇಂದ್ರ ಹಾಗೂ ರಾಜ್ಯದ ಪ್ರಮುಖ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಲಿದೆ. ಈ ಭೇಟಿಯಲ್ಲಿ ಅಮಿತ್ ಶಾ, ಭೂಪೇಂದ್ರ ಪಟೇಲ್, ಸಿ.ಆರ್. ಪಾಟೀಲ್ ಸೇರಿ ಹಲವರು ಉಪಸ್ಥಿತರಿರಬಹುದು.

ಘಟನೆಯ ನಂತರ ಅಮಿತ್ ಶಾ ಅಪಘಾತ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯಸ್ಥಿತಿಯನ್ನು ಪರಿಶೀಲಿಸಿದರು. ಡಿಎನ್ಎ ಪರೀಕ್ಷೆಯ ನಂತರ ಮೃತರ ಅಂತಿಮ ಗುರುತು ಪತ್ತೆಯಾಗಲಿದೆ. ವಿಮಾನದಲ್ಲಿ 1,25,000 ಲೀಟರ್ ಇಂಧನ ಇದ್ದು, ಉರಿಯುತ್ತಿರುವ ಪರಿಣಾಮವಾಗಿ ರಕ್ಷಣೆ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಕರಣದ ಅಧಿಕೃತ ತನಿಖೆ ಆರಂಭಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

265 ಜೀವಕ್ಕೆ ಭೀಕರ ಕೊನೆ: ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟಾರೆ 265 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಬಳಿಯೆ ಪತನಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕಂಡ ಅತ್ಯಂತ ಭೀಕರ ವಿಮಾನ ದುರಂತ ಇದಾಗಿದೆ.

ಕೇರಳದ ರಂಜಿತಾ ಗೋಪಕುಮಾರ್ ದುಃಖಾಂತ: ವಿಮಾನದಲ್ಲಿ ಕೇರಳದ ಪುಲ್ಲಾಡ್ ಮೂಲದ ರಂಜಿತಾ ಗೋಪಕುಮಾರ್ ಅವರು ಸಾವನ್ನಪ್ಪಿದ್ದಾರೆ. ಲಂಡನ್ನಲ್ಲಿ ಉದ್ಯೋಗ ಪ್ರಾರಂಭಿಸಲು ತೆರಳುತ್ತಿದ್ದ ಅವರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾಗ ವಿಧಿಯಾಟಕ್ಕೆ ಬಲಿಯಾದರು. ಅವರ ಕನಸುಗಳೆಲ್ಲಾ ಪತನಗೊಂಡ ವಿಮಾನದೊಂದಿಗೆ ಸಮಾಧಿಯಾದವು.

ರಂಜಿತಾ ಅವರು ತಮ್ಮ ಇಬ್ಬರು ಮಕ್ಕಳಿಗೆ “ಓಣಂ ಹಬ್ಬಕ್ಕೆ ಮನೆಗೆ ಬರುತ್ತೇನೆ” ಎಂದು ಹೇಳಿದ್ದರು. ಆದರೆ ತಮ್ಮ ತಾಯಿಯ ಮೃತದೇಹವೇ ಊರಿಗೆ ಮರಳಿದರೆಂದು ತಿಳಿದ ಮಕ್ಕಳಿಗೆ ತಾಳಲಾಗದ ನೋವಾಯಿತು. ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.

ವಿಜಯ್ ರೂಪಾನಿ ಸಾವಿಗೆ ದೃಢೀಕರಣ: ಅಪಘಾತದಲ್ಲಿ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ದೃಢಪಡಿಸಿದ್ದಾರೆ. ಅವರು ಲಂಡನ್‌ ಗೆ ತಮ್ಮ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದರು.

ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯ ತ್ವರಿತಗೊಳಿಸಿ ಅಪಘಾತದ ಬಳಿಕ ತಕ್ಷಣವೇ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಿಎಂ ಆದೇಶ ನೀಡಿದ್ದಾರೆ. ಹಸಿರು ಕಾರಿಡಾರ್ ವ್ಯವಸ್ಥೆ ಮಾಡುವಂತೆ, ಆಸ್ಪತ್ರೆಗೆ ತ್ವರಿತ ಚಿಕಿತ್ಸೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.

ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಈ ವಿಮಾನ ದುರಂತವು ನೂರಾರು ಕುಟುಂಬಗಳ ಕನಸುಗಳನ್ನು ನುಚ್ಚು ನೂರಾಗಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಗಳಿಗೆ ಬಲ ಮತ್ತು ಧೈರ್ಯ ಸಿಗಲೆಂದು ನಾವು ಪ್ರಾರ್ಥಿಸೋಣ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page