New Delhi: ಭಾರತದಲ್ಲಿ 16 ವರ್ಷಗಳ ನಂತರ ಹೊಸ ಜನಗಣತಿ ಪ್ರಕ್ರಿಯೆ (New Census) ಆರಂಭವಾಗಲಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
2027ರ ಫೆಬ್ರವರಿಯಲ್ಲಿ ನಡೆಯಲಿರುವ ಈ 16ನೇ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿ ಗಣತಿಯನ್ನೂ ಇದೇ ಮೊದಲ ಬಾರಿಗೆ ಸೇರಿಸಲಾಗಿದೆ.
ಮುಖ್ಯ ಅಂಶಗಳು
- ಈ ಮಹತ್ತ್ವದ ಕಾರ್ಯಕ್ಕಾಗಿ 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, ಜೊತೆಗೆ 1.34 ಲಕ್ಷ ಸಿಬ್ಬಂದಿ ನೇಮಿಸಲಾಗುತ್ತಾರೆ.
- ಈ ಬಾರಿಗೆ ಜನಗಣತಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಟ್ಯಾಬ್ಲೆಟ್ ಬಳಸಿ ಮಾಡಲಾಗುತ್ತದೆ.
- ಮಾರ್ಚ್ 1, 2027ನ್ನು ಉಲ್ಲೇಖ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅಂದರೆ ಫೆಬ್ರವರಿ 28ರ ರಾತ್ರಿಯ ತನಕ ಜನಗಣತಿ ನಡೆಯುತ್ತದೆ.
- ಜನಗಣತಿಯ ಮೊದಲ ಹಂತವಾದ ಮನೆ ಪಟ್ಟಿಯನ್ನು ಏಪ್ರಿಲ್ 2026ರಲ್ಲಿ ಪ್ರಾರಂಭಿಸಲಾಗುತ್ತದೆ.
- ಹಿಮ ಪ್ರದೇಶಗಳಾದ ಲಡಾಖ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜನಗಣತಿ ಅಕ್ಟೋಬರ್ 1, 2026ರಂದು ಆರಂಭವಾಗಲಿದೆ.
- ಕೊನೆಯದಾಗಿ ಜನಗಣತಿ 2011ರಲ್ಲಿ ನಡೆದಿತ್ತು. 2021ರ ಜನಗಣತಿ ಕೋವಿಡ್ ಕಾರಣದಿಂದ ಕೈಕೊಟ್ಟಿತ್ತು.
ಈಗ 16 ವರ್ಷಗಳ ನಂತರ, ಜನಗಣತಿಗೆ ಜೊತೆಗೆ ಜಾತಿಗಣತಿ ಕೂಡ ನಡೆಯುತ್ತಿದೆ ಎಂಬುದು ವಿಶೇಷ.