back to top
22.6 C
Bengaluru
Wednesday, June 18, 2025
HomeKarnatakaHubballiHubballi ಯ ವಿವಾದಿತ ಈದ್ಗಾ ಮೈದಾನದಲ್ಲಿ ಫ್ಲೈಓವರ್ ಕಾಮಗಾರಿಗೆ ಜಾಗ ತೆರವು

Hubballi ಯ ವಿವಾದಿತ ಈದ್ಗಾ ಮೈದಾನದಲ್ಲಿ ಫ್ಲೈಓವರ್ ಕಾಮಗಾರಿಗೆ ಜಾಗ ತೆರವು

- Advertisement -
- Advertisement -

Hubballi : ಹುಬ್ಬಳ್ಳಿಯ (Hubballi) ಚನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದ (Eidgah ground) ಎರಡು ಕಡೆಯ ಕಂಪೌಂಡ್‌ಗಳನ್ನು ತೆರವುಗೊಳಿಸಲಾಗಿದೆ. ಗದಗ ರಸ್ತೆ ಮತ್ತು ವಿಜಯಪುರ ರಸ್ತೆಯ ಪಕ್ಕದಲ್ಲಿದ್ದ ಈ ಕಂಪೌಂಡ್‌ಗಳನ್ನು ಪ್ಲೈಓವರ್ ಕಾಮಗಾರಿ ಸುಗಮವಾಗಿಸಲು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮೈದಾನದ ಒಳಗಿರುವ ಹಲವಾರು ಮರಗಳನ್ನು ಕೂಡ ಕಡಿದು ಹಾಕಲಾಗಿದೆ. ಮೈದಾನ ಒಟ್ಟು 1.5 ಎಕರೆ ವಿಸ್ತೀರ್ಣ ಹೊಂದಿದ್ದು, ಈಗ ಪ್ಲೈಓವರ್ ನಿರ್ಮಾಣದ ಅವಶ್ಯಕತೆಯಿಂದಾಗಿ ಈ ಭಾಗದ ಜಾಗ ಬಳಸಲಾಗುತ್ತಿದೆ.

ಫ್ಲೈಓವರ್ ಚನ್ನಮ್ಮ ವೃತ್ತದಿಂದ ಗದಗ ರಸ್ತೆ ಹಾಗೂ ವಿಜಯಪುರ ರಸ್ತೆಯ ಕಡೆಗೆ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಆರಂಭಿಸಲು ಪುರಸಭೆ ಗುತ್ತಿಗೆದಾರ ಕಂಪನಿಗೆ ಅನುಮತಿ ನೀಡಿರುವುದರಿಂದ ಕಳೆದ ಎರಡು ದಿನಗಳಿಂದ ಈದ್ಗಾ ಮೈದಾನದ ಭಾಗ ತೆರವುಗೊಳ್ಳುತ್ತಿದೆ.

ಈದ್ಗಾ ಮೈದಾನ ಹಲವು ಹೋರಾಟಗಳಿಗೆ ಸಾಕ್ಷಿಯಾಗಿದೆ. ಬ್ರಿಟಿಷ್ ಕಾಲದಲ್ಲಿ ಈ ಜಾಗವನ್ನು ಹುಬ್ಬಳ್ಳಿ ಅಂಜುಮನ್ ಸಂಸ್ಥೆಗೆ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ನಡೆಸಲು 999 ವರ್ಷಗಳ ಲೀಸ್‌ ಮೇಲೆ ನೀಡಲಾಗಿತ್ತು. ಆದರೆ, ಸ್ವಾತಂತ್ರ್ಯದ ನಂತರ ಈ ವಿವಾದ ಮುಂದುವರಿಯಿತು.

1980ರಲ್ಲಿ ಅಂಜುಮನ್ ಸಂಸ್ಥೆ ಇಲ್ಲಿ ಮಳಿಗೆ ನಿರ್ಮಿಸಲು ಯತ್ನಿಸಿದ್ದರೆ, ಮಹಾನಗರ ಪಾಲಿಕೆ ಅದನ್ನು ತಡೆಯಿತು. ನಂತರ ಪ್ರಕರಣ ನ್ಯಾಯಾಲಯಕ್ಕೆ ಹೋಗಿ, ಸುಪ್ರೀಂ ಕೋರ್ಟ್ ಈ ಜಾಗ ಪಾಲಿಕೆಗೆ ಸೇರಿದದು ಎಂದು ತೀರ್ಮಾನಿಸಿತು.

1992ರಲ್ಲಿ ತಿರಂಗಾ ಯಾತ್ರೆಯ ಸಂದರ್ಭದಲ್ಲಿ ಈ ಮೈದಾನದಲ್ಲಿ ಧ್ವಜಾರೋಹಣಕ್ಕೆ ಯತ್ನ ನಡೆಸಲಾಗಿತ್ತು, ಅಂಜುಮನ್ ಸಂಸ್ಥೆ ವಿರೋಧ ವ್ಯಕ್ತಪಡಿಸಿದ್ದರಿಂದ ಗಲಾಟೆ ಉಂಟಾಯಿತು. 1994ರಲ್ಲಿ ಉಮಾ ಭಾರತಿ ತಿರಂಗಾ ಹಾರಿಸಲು ಬಯಸಿದಾಗಲೂ ಗಲಾಟೆ ನಡೆಯಿತು ಮತ್ತು ಗೋಲಿಬಾರೂ ನಡೆದಿದೆ.

ಇತ್ತೀಚೆಗೆ, ಈ ಮೈದಾನದಲ್ಲಿ ಮುಸ್ಲಿಂ ಸಮುದಾಯ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಮಾಡುತ್ತಿದ್ದರೆ, ಹಿಂದೂ ಸಮುದಾಯ ಗಣೇಶ ಹಬ್ಬದ ವೇಳೆ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಈಗ ಈ ವಿವಾದಿತ ಮೈದಾನದ ಭಾಗಗಳಲ್ಲಿ ಫ್ಲೈಓವರ್ ನಿರ್ಮಾಣ ಆರಂಭವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page