back to top
27 C
Bengaluru
Wednesday, September 17, 2025
HomeNewsIsrael ಆಸ್ಪತ್ರೆಯ ಮೇಲೆ Iran ಕ್ಷಿಪಣಿ ದಾಳಿ: 47 ಮಂದಿ ಗಾಯಗೊಂಡರು

Israel ಆಸ್ಪತ್ರೆಯ ಮೇಲೆ Iran ಕ್ಷಿಪಣಿ ದಾಳಿ: 47 ಮಂದಿ ಗಾಯಗೊಂಡರು

- Advertisement -
- Advertisement -

Tel Aviv, Israel: ಇತ್ತೀಚೆಗೆ ಇರಾನ್ ಇಸ್ರೇಲ್ ನ (Israel) ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದ್ದರೆ, ಇದೀಗ ನೇರವಾಗಿ ಆಸ್ಪತ್ರೆಗಳತ್ತ ತನ್ನ ದಾಳಿಯನ್ನು ವಿಸ್ತರಿಸಿದೆ. ಗುರುವಾರ ಬೆಳಿಗ್ಗೆ ಇಸ್ರೇಲ್ ನ ಅತ್ಯಂತ ದೊಡ್ಡ ಆಸ್ಪತ್ರೆಯಾದ ಸರೋಕಾ ವೈದ್ಯಕೀಯ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ 47 ಜನರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಬಾಂಬ್ ಸ್ಫೋಟದ ಬಳಿಕ ಜನರು ಹಾಗೂ ಆಸ್ಪತ್ರೆಯ ವೈದ್ಯರು ಆತಂಕದಿಂದ ಓಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಆಸ್ಪತ್ರೆಗೆ ತೀವ್ರ ಹಾನಿ ಆಗಿದ್ದು, ಕಿಟಕಿಗಳು ಪುಡಿಪಡಿಕೊಂಡಿವೆ. ಕಟ್ಟಡದ ಒಳಗೆ ಧೂಮಪಟಳ ಆವರಿಸಿದ್ದು, ಹಲವರು ಭಯಭೀತರಾಗಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿರುವ ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು, “ಇದು ಯುದ್ಧ ಅಪರಾಧವಾಗಿದೆ. ಇರಾನ್ ಗೆ ತಕ್ಕ ಪ್ರತೀಕಾರ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ರೋಗಿಗಳ ರಕ್ಷಣೆಗಾಗಿ, ಇಸ್ರೇಲ್ ಹಲವೆಡೆ ಬಂಕರ್‌ಗಳನ್ನು ಮತ್ತು ಭೂಗತ ಆಸ್ಪತ್ರೆಗಳ ವ್ಯವಸ್ಥೆ ಮಾಡಿದೆ. ತುರ್ತು ಚಿಕಿತ್ಸೆಯು ರಹಸ್ಯ ಸ್ಥಳಗಳಲ್ಲಿ ನಡೆಯುತ್ತಿದೆ. ವೆಂಟಿಲೇಟರ್‌ನಂತಹ ಆರೈಕೆ ಬೇಕಾದವರನ್ನು ಭೂಗತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಸರೋಕಾ ಆಸ್ಪತ್ರೆ, 1000 ಹಾಸಿಗೆಗಳ ವ್ಯವಸ್ಥೆಯೊಂದಿಗೆ ಇಸ್ರೇಲ್ನ ದಕ್ಷಿಣ ಭಾಗದ 1 ಮಿಲಿಯನ್ ಜನರಿಗೆ ಸೇವೆ ನೀಡುತ್ತಿದೆ.

ಇದಕ್ಕೂ ಮುನ್ನ, ಇಸ್ರೇಲ್ ಇರಾನ್‌ನ ರಾಜಧಾನಿ ಟೆಹ್ರಾನ್‌ನ ಅಣ್ವಸ್ತ್ರ ಘಟಕದ ಮೇಲೆ ದಾಳಿ ನಡೆಸಿತ್ತು. radiation ಸೋರಿಕೆ ಭಯವಿದ್ದರೂ, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲಾಗಿದೆ.

ಹಣಾಹಣಿಯಲ್ಲಿ ಬಲಿಯಾದವರ ವಿವರ

  • ಇರಾನ್ ನಲ್ಲಿ: 639 ಜನ ಮೃತರು, ಅವರಲ್ಲಿ 263 ಜನ ನಾಗರಿಕರು
  • 1,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ
  • ಇರಾನಿಂದ ಇಸ್ರೇಲ್ ಕಡೆಗೆ: 400 ಕ್ಷಿಪಣಿಗಳು ಮತ್ತು ನೂರಾರು ಡ್ರೋನ್‌ಗಳು
  • ಇಸ್ರೇಲ್‌ನಲ್ಲಿ: 24 ಜನರು ಸಾವನ್ನಪ್ಪಿದ್ದು, ನೂರಾರು ಗಾಯಗೊಂಡಿದ್ದಾರೆ

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page