back to top
24 C
Bengaluru
Saturday, August 30, 2025
HomeKarnataka30 ವರ್ಷಗಳ ಹಳೆಯ Bribery Case: ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಈಗ ಜೈಲು ಶಿಕ್ಷೆ!

30 ವರ್ಷಗಳ ಹಳೆಯ Bribery Case: ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗೆ ಈಗ ಜೈಲು ಶಿಕ್ಷೆ!

- Advertisement -
- Advertisement -

Belagavi: 30 ವರ್ಷ ಹಿಂದಿನ 500 ರೂ. ಲಂಚ ಪ್ರಕರಣದಲ್ಲಿ (bribery case) ನಿವೃತ್ತಗೊಂಡ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ ಶಿವಂಗೇಕರ್ ಅವರಿಗೆ ಇದೀಗ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರು 10 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಪ್ರಕರಣ ಇನ್ನಷ್ಟು ವಿಚಿತ್ರವಾಗಿರೋದು ಎಂದ್ರೆ, ಈ ದೂರು ನೀಡಿದ ವ್ಯಕ್ತಿ ಲಕ್ಮಣ ಕಟಾಂಬಳೆ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

ಈ ಘಟನೆ 30 ವರ್ಷಗಳ ಹಿಂದೆ ನಡೆದಿದ್ದು, ಪಹಣಿ ಪತ್ರದಲ್ಲಿ ಹೆಸರು ಬದಲಾಯಿಸಲು ನಾಗೇಶ್ ಶಿವಂಗೇಕರ್ 500 ರೂ. ಲಂಚ ಕೇಳಿದ್ದರು. ಈ ಬಗ್ಗೆ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಲೋಕಾಯುಕ್ತಕ್ಕೆ ದೂರು ನೀಡಿದ್ರು. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

2006ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ನಾಗೇಶ್ ಶಿವಂಗೇಕರ್‌ರಿಗೆ ಒಂದು ವರ್ಷ ಜೈಲು ಮತ್ತು 1,000 ರೂ. ದಂಡ ವಿಧಿಸಲಾಗಿತ್ತು. ನಂತರ ಅವರು ಧಾರವಾಡ ಹೈಕೋರ್ಟ್ ಮೊರೆಹೋಗಿ ತಾತ್ಕಾಲಿಕ ರಿಲೀಫ್ ಪಡೆದಿದ್ದರು. ಆದರೆ, ಲೋಕಾಯುಕ್ತರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಈಗ ಸುಪ್ರೀಂ ಕೋರ್ಟ್ ಲೋಕಾಯುಕ್ತ ಪರ ತೀರ್ಪು ನೀಡಿದ್ದು, ನಾಗೇಶ್ ಮತ್ತೆ ಜೈಲಿಗೆ ಹೋಗಬೇಕಾಗಿದೆ. ಅವರನ್ನು ಹಿಂಡಲಗಾ ಜೈಲಿಗೆ ಕಳಿಸಲಾಗಿದೆ.

ಇದೇ ವೇಳೆ, ರಾಮನಗರದ ವಿವಿಧ ತಾಲೂಕು ಕಚೇರಿಗಳಲ್ಲಿ ಅಕ್ರಮ ವ್ಯವಹಾರದ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೀವ್ರ ದಾಳಿ ನಡೆಸಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕು ಕಚೇರಿಗಳಲ್ಲಿ ದಿಢೀರ್ ಪರಿಶೀಲನೆ ನಡೆಸಲಾಗಿದೆ.

ಹಳೆಯ ಲಂಚ ಪ್ರಕರಣವೂ ಇಂದಿಗೂ ನ್ಯಾಯ ಪಡೆಯುತ್ತೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಜೊತೆಗೆ ಸರ್ಕಾರದ ಕಚೇರಿಗಳಲ್ಲಿನ ಅಕ್ರಮಗಳ ಮೇಲೂ ಭದ್ರ ವೀಕ್ಷಣೆ ನಡೆಯುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page