Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಯಾವಾಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಅಷ್ಟೇನು ಖಚಿತವಿಲ್ಲ. ಇಸ್ರೇಲ್ ಹಾಗೂ ಇರಾನ್ (Iran) ನಡುವಿನ ಸಂಘರ್ಷದಲ್ಲಿ ಅಮೆರಿಕ ಭಾಗವಹಿಸಬೇಕೆ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸಲು ಎರಡು ವಾರಗಳ ಸಮಯ ಕೇಳಿದ್ರು. ಆದರೆ, ಎರಡೇ ದಿನದೊಳಗೆ ಇರಾನ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ್ದಾರೆ!
ಅಮೆರಿಕದ ಸೇನೆ ಇರಾನ್ನ ಮೂರು ಪರಮಾಣು ಘಟಕಗಳ ಮೇಲೆ ಬಿ-2 ಬಾಂಬರ್ ಹಾಗೂ ಬಂಕರ್ ಬಸ್ಟರ್ ಬಾಂಬ್ಗಳೊಂದಿಗೆ ದಾಳಿ ನಡೆಸಿತು. ಈ ಘಟಕಗಳು ಫೋರ್ಡೋ, ನಟಾಂಜ್ ಮತ್ತು ಎಸ್ಪಹಾನ್ ಎಂಬ ಸ್ಥಳಗಳಲ್ಲಿ ಇದ್ದವು. ವಿಶ್ವದ ದೃಷ್ಠಿಯಲ್ಲಿ ದಾಳಿಯ ಸಮಯ ಅಚ್ಚರಿಯಾಯಿತು!
ಜೂನ್ 20ರಂದು ಟ್ರಂಪ್, ಅಮೆರಿಕದ ಪಾತ್ರದ ಬಗ್ಗೆ ತೀರ್ಮಾನಿಸಲು 2 ವಾರಗಳು ಬೇಕು ಎಂದಿದ್ದರು. ಆದರೆ, ಜೂನ್ 22 ರಂದು ಕೂಡಲೇ ದಾಳಿಗೆ ಆದೇಶ ನೀಡಿದರು. ಪಾಕಿಸ್ತಾನವು ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ್ದ ದಿನದ ಮುಂದಿನ ದಿನವೇ ದಾಳಿ ಆರಂಭವಾಯಿತು.
ಟ್ರಂಪ್ ತಮ್ಮನ್ನು ಶಾಂತಿಯ ಮಿತ್ರ ಎಂದರೂ, ಈ ಕ್ರಮ ಅವರ ಶಬ್ದಗಳಿಗೆ ವಿರುದ್ಧವಾಗಿದೆ. ಅವರು ಹಿಂದಿನಿಂದ ಅನೇಕ ಯುದ್ಧಗಳನ್ನು ನಿಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ — ಸೆರ್ಬಿಯಾ-ಕೊಸೊವೊ, ಈಜಿಪ್ಟ್-ಇಥಿಯೋಪಿಯಾ, ಪಾಕಿಸ್ತಾನ-ಭಾರತ ನಡುವಿನ ಸಂಘರ್ಷ.
ಇಸ್ರೇಲ್ ಬೆಂಬಲಕ್ಕೆ ಬಂದ ಅಮೆರಿಕದ ನಂತರವೂ ಇರಾನ್ ದಾಳಿ ನಿಲ್ಲಿಸಿಲ್ಲ. ಇಸ್ರೇಲ್ನ ನಿವಾಸಗಳು, ಕಚೇರಿಗಳು, ಆಸ್ಪತ್ರೆಗೆ ಭೀಕರ ದಾಳಿ ನಡೆದಿದೆ. ಟೆಹ್ರಾನ್ನಲ್ಲಿ ಸೈರನ್ಗಳು ಮೊಳಗುತ್ತಿವೆ. ಇಸ್ರೇಲ್ ಕೂಡಾ ಇದಕ್ಕೂ ಮೊದಲು ಎರಡು ಬಾರಿ ಇರಾನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿತ್ತು.