Search
WhatsApp alerts

Home › Environment

Western Ghats ದಲ್ಲಿ ಭಾರಿ ಮಳೆ: ಖಾನಾಪುರದ 15ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ

administrator · Published

Heavy rains in Western Ghats

Belagavi: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ 34 (Western Ghats) ಗಂಟೆಗಳ ಹಿಂದಿನಿಂದಲೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಹಾಗೂ ಹಲವಾರು ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದರಿಂದ 15ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಮಂತುರ್ಗಾದ ಬಳಿ ಸೇತುವೆ ಮೇಲೆ ಹಾಲಾತ್ರಿ ಹಳ್ಳ ತುಂಬಿ ಹರಿಯುತ್ತಿದ್ದು, ಬೆಳಗಾವಿ-ಚೋರ್ಲಾ, ಜಾಂಬೋಟಿ-ಜತ್ತ ಹಾಗೂ ಸಿಂಧನೂರು-ಹೆಮ್ಮಡಗಾ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ಮುಚ್ಚಲಾಗಿದೆ. ಜನರಿಗೆ ಈ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಹೋಗಬಾರದೆಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಕುಸಮಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಸರ್ವೀಸ್ ರಸ್ತೆ ಕುಸಿತಗೊಂಡ ಕಾರಣ ಬೆಳಗಾವಿ-ಗೋವಾ ಸಂಪರ್ಕ ಕಡಿತವಾಯಿತು. ಬಳಿಕ ವಾಹನಗಳಿಗೆ ಬೈಲೂರು ಮತ್ತು ಹಬ್ಬನಾಟ್ಟಿ ಮೂಲಕ ದಾರಿ ನೀಡಲಾಯಿತು. ಆದರೆ, ಈಗ ಆ ಮಾರ್ಗಕ್ಕೂ ನೀರು ಹರಿದಿರುವ ಕಾರಣ, ಗೋವಾಗೆ ಹೋಗಲು ರಾಮನಗರ ಮಾರ್ಗದಲ್ಲಿ ತೆರಳಬೇಕಾಗಿದೆ.

ಉಕ್ಕಿಹರಿಯುತ್ತಿರುವ ನದಿಗಳು ಮತ್ತು ಹಳ್ಳಗಳು

  • ನದಿಗಳು: ಮಲಪ್ರಭಾ, ಮಹದಾಯಿ, ಪಾಂಡು
  • ಹಳ್ಳಗಳು: ಹಾಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟಿ, ಪಣಸೂರಿ, ಬೈಲ್, ಕಳಸಾ, ಬಂಡೂರಿ

ಪರಿಣಾಮ

  • ನೆರಸೆ, ಮಂತುರ್ಗಾ, ಅಶೋಕನಗರ, ಗವಳಿವಾಡ, ಹೆಮ್ಮಗಡಾ ಸೇರಿ ಹಲವಾರು ಗ್ರಾಮಗಳು ಸಂಪರ್ಕ ಕಡಿತವಾಗಿದೆ.
  • ವಿದ್ಯುತ್ ಸಂಪರ್ಕ ಕಡಿತವಾಗಿದೆ.
  • ಹಬ್ಬಾನಟ್ಟಿ ಗ್ರಾಮದ ಮಲಪ್ರಭಾ ನದಿ ತಟದಲ್ಲಿರುವ ಮಾರುತಿ ದೇವಸ್ಥಾನ ಮುಳುಗಿದೆ.
  • ಚಿಕ್ಕಹಟ್ಟಿಹೊಳಿ ಸೇತುವೆ ಮೇಲೆ ನದಿ ಹರಿಯುತ್ತಿದೆ.

ನಗರ ಪರಿಸ್ಥಿತಿ: ಬೆಳಗಾವಿ ನಗರದಲ್ಲಿಯೂ ನಿರಂತರ ಮಳೆ ಆಗುತ್ತಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರ ಕೂಡ ಮಳೆ ಮುಂದುವರಿದರೆ ಮತ್ತಷ್ಟು ರಜೆಗಳ ಸಾಧ್ಯತೆ ಇದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page