Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಅವರು ಭಾರತ ಹಾಗೂ ಅಮೆರಿಕ ನಡುವಿನ ದೊಡ್ಡ ವ್ಯಾಪಾರ ಒಪ್ಪಂದದ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಬಹುದೆಂದು ಸೂಚನೆ ನೀಡಿದ್ದಾರೆ.
ಚೀನಾದೊಂದಿಗೆ ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಟ್ರಂಪ್, “ಭಾರತದೊಂದಿಗೆ ಕೂಡ ದೊಡ್ಡ ಮತ್ತು ಸುಂದರವಾದ ಒಪ್ಪಂದವಾಗಲಿದೆ” ಎಂದು ಹೇಳಿದರು. ಅವರು ಬಿಗ್ ಬ್ಯೂಟಿಫುಲ್ ಬಿಲ್ ಎಂಬ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
- ಚೀನಾದೊಂದಿಗೆ ಒಪ್ಪಂದ ಅಚ್ಚರಿಯಾಗಿದೆ.
- ಮುಂದಿನ ಹಂತದಲ್ಲಿ ಭಾರತದೊಂದಿಗೆ ದೊಡ್ಡ ವ್ಯವಹಾರ ನಡೆಯಲಿದೆ.
- ಇಂಥ ದೊಡ್ಡ ಒಪ್ಪಂದಗಳನ್ನು ಎಲ್ಲ ದೇಶಗಳೊಂದಿಗೆ ಮಾಡೋದು ಸಾಧ್ಯವಿಲ್ಲ.
- ಕೆಲವರಿಗೆ ಮಾತ್ರ ನಾವು ಈ ಮಹತ್ವದ ಒಪ್ಪಂದಗಳನ್ನು ನೀಡುತ್ತೇವೆ.
ಅಮೆರಿಕ-ಚೀನಾ ಒಪ್ಪಂದದ ಸ್ತರ ಮತ್ತು ವಿಷಯವನ್ನು ವಿವರಿಸಲು ಟ್ರಂಪ್ ನಿರಾಕರಿಸಿದರೂ, ನಿಷೇಧಗಳನ್ನು ಸಡಿಲಿಸಿ ಲಾಭದಾಯಕ ಒಪ್ಪಂದವಾಗಿದೆ ಎಂದರು. ಚೀನಾ, ಅಮೆರಿಕಕ್ಕೆ ಮ್ಯಾಗ್ನೆಟ್ ಮತ್ತು ಅಪರೂಪದ ಲೋಹಗಳನ್ನು ನೀಡಲಿದೆ ಎಂದು ತಿಳಿಸಿದರು.
ಅದೇ ವೇಳೆ, ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್ನಿಕ್ ಕೂಡ ಈ ತಿಂಗಳ ಆರಂಭದಲ್ಲಿ ಭಾರತ–ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಶೀಘ್ರದಲ್ಲಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಒಪ್ಪಂದವು ಎರಡೂ ದೇಶಗಳ ಪರಸ್ಪರ ಲಾಭಕ್ಕಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದ್ದರು.