HomeBusinessRDI Scheme: ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರದಿಂದ ನೂತನ ಯೋಜನೆ

RDI Scheme: ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರದಿಂದ ನೂತನ ಯೋಜನೆ

- Advertisement -
- Advertisement -

Delhi: ಸಂಶೋಧನೆ (R&D) ಮತ್ತು ನಾವೀನ್ಯತೆಯ ಕ್ಷೇತ್ರದಲ್ಲಿ ಹಿಂದಿರುವ ಭಾರತದಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ತಂದಿದೆ. ಇದರ ಹೆಸರೇ ಆರ್‌ಡಿಐ ಸ್ಕೀಮ್ (RDI Scheme).

ಈ ಯೋಜನೆಗೆ 1 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ನೀಡಲು ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಇದು ಸೋಲಾರ್ ಎನರ್ಜಿ ಮುಂತಾದ ಉದಯೋನ್ಮುಖ ಕ್ಷೇತ್ರಗಳಲ್ಲಿ (sunrise sectors) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ.

RDI Scheme ನ ಮುಖ್ಯ ಉದ್ದೇಶಗಳು

  • ಸಂಶೋಧನೆ, ಅಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವುದು.
  • ಖಾಸಗಿ ವಲಯದಿಂದ R&D ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಸೆಳೆಯುವುದು.
  • ಬಡ್ಡಿರಹಿತ ಅಥವಾ ಕಡಿಮೆ ಬಡ್ಡಿದರದ ದೀರ್ಘಾವಧಿಯ ಸಾಲಗಳ ವ್ಯವಸ್ಥೆ ಮಾಡುವುದು.
  • ಈ ಯೋಜನೆಯನ್ನು ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಅಡಿಯಲ್ಲಿ ನಡೆಸಲಾಗುತ್ತದೆ.
  • ಯೋಜನೆ ನಿರ್ವಹಣೆಗೆ ವಿಶೇಷ ಉದ್ದೇಶದ ನಿಧಿ (Special Purpose Fund) ಸ್ಥಾಪಿಸಲಾಗುತ್ತದೆ.
  • ಈ ನಿಧಿಗೆ ಸರ್ಕಾರವು 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡಲಿದೆ.

ಸ್ಕೀಮ್‌ನ ಗುರಿಗಳು

  • ಭಾರತದ ಭವಿಷ್ಯಕ್ಕೆ ಮಹತ್ವದ ಕ್ಷೇತ್ರಗಳಲ್ಲಿ R&D ಹೂಡಿಕೆಯನ್ನು ಉತ್ತೇಜಿಸುವುದು.
  • ಅಗತ್ಯವಿರುವ ತಂತ್ರಜ್ಞಾನ ಖರೀದಿಗೆ ನೆರವಾಗುವುದು.
  • ಡೀಪ್ ಟೆಕ್ ಫಂಡ್ ಮೂಲಕ ತಂತ್ರಜ್ಞಾನ ಅಭಿವೃದ್ಧಿಗೆ ಸಹಾಯ ಮಾಡುವುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!