back to top
22.5 C
Bengaluru
Wednesday, September 17, 2025
HomeAutoKia car ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಕಂಪನಿಗೆ ದಾಖಲೆ ಲಾಭ!

Kia car ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಕಂಪನಿಗೆ ದಾಖಲೆ ಲಾಭ!

- Advertisement -
- Advertisement -

ಕೊರಿಯಾ ಮೂಲದ ಪ್ರಸಿದ್ಧ ಕಾರು ತಯಾರಕ ಕಂಪನಿ ಕಿಯಾ, (Kia car) 2025ರ ಮೊದಲಾರ್ಧದಲ್ಲಿ ಭಾರತದಲ್ಲಿ 1,42,139 ಕಾರುಗಳನ್ನು ಮಾರಾಟ ಮಾಡಿ ಶೇ.12.7ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,26,137 ಕಾರುಗಳು ಮಾರಾಟವಾಗಿದ್ದವು.

ಇತ್ತೀಚೆಗೆ ಬಿಡುಗಡೆಗೊಂಡ ಕಾರೆನ್ಸ್ ಕ್ಲಾವಿಸ್ ಎಂಬ ಎಂಪಿವಿ ಮಾದರಿ ಹೆಚ್ಚು ಬೇಡಿಕೆಗೆ ಪಾತ್ರವಾಗಿದೆ. ಇದರಲ್ಲಿರುವ ಪ್ರೀಮಿಯಂ ಸೌಲಭ್ಯಗಳು ಹಾಗೂ ಉನ್ನತ ಮಟ್ಟದ ಸುರಕ್ಷತೆ ಕಾರಣವಾಗಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ‘ಮೇಡ್ ಇನ್ ಇಂಡಿಯಾ’ ಕಿಯಾ ಕಾರುಗಳಿಗೆ ಸ್ಥಿರ ಬೇಡಿಕೆ ಇದೆ. 2025ರ ಮೊದಲಾರ್ಧದಲ್ಲಿ ಕಿಯಾ 11,813 ಕಾರುಗಳನ್ನು ಇತರ ದೇಶಗಳಿಗೆ ರಫ್ತು ಮಾಡಿದೆ.

ಭಾರತದಲ್ಲಿ ಕಿಯಾ ಕಂಪನಿಯು ಆರಂಭದಿಂದ ಈವರೆಗೆ ಸೆಲ್ಟೋಸ್, ಸೈರಸ್, ಸೋನೆಟ್, ಕಾರೆನ್ಸ್, ಕಾರ್ನಿವಲ್, EV6, EV9 ಮತ್ತು ಇತ್ತೀಚಿನ ಕಾರೆನ್ಸ್ ಕ್ಲಾವಿಸ್ ಸೇರಿ ಒಟ್ಟು 8 ಕಾರುಗಳನ್ನು ಪರಿಚಯಿಸಿದೆ. ಇದರ ಅನಂತಪುರ ಘಟಕದಿಂದ ಈಗಾಗಲೇ 15 ಲಕ್ಷಕ್ಕಿಂತ ಹೆಚ್ಚು ಕಾರುಗಳು ಹೊರಬಿದ್ದಿವೆ. ಇದರಲ್ಲಿ 12 ಲಕ್ಷ ಕಾರುಗಳು ದೇಶೀಯವಾಗಿ ಮಾರಾಟವಾಗಿದ್ದು, 3.67 ಲಕ್ಷಕ್ಕೂ ಹೆಚ್ಚು ಕಾರುಗಳು ರಫ್ತು ಆಗಿವೆ.

ಇಂದಿಗೆ ಭಾರತದಲ್ಲಿ 4.5 ಲಕ್ಷಕ್ಕೂ ಹೆಚ್ಚು “ಸಂಪರ್ಕಿತ ಕಾರುಗಳು” ಕಿಯಾ ಬಳಿ ಇದೆ. ಈ ಮೂಲಕ, ಇದು ಭಾರತದಲ್ಲಿನ ಪ್ರಮುಖ ಸಂಪರ್ಕಿತ ಕಾರು ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ದೇಶದಾದ್ಯಂತ 744 ಟಚ್‌ಪಾಯಿಂಟ್‌ಗಳೊಂದಿಗೆ 329 ನಗರಗಳಲ್ಲಿ ಕಿಯಾ ತನ್ನ ಸೇವೆಗಳನ್ನು ನೀಡುತ್ತಿದೆ.

“2025ರ ಆರಂಭದಿಂದಲೇ ನಾವು ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಹೊಸ ಕಾರುಗಳು ಮತ್ತು ಗ್ರಾಹಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ. ಈ ತಿಂಗಳಲ್ಲಿ ಮೊದಲ ‘ಮೇಡ್ ಇನ್ ಇಂಡಿಯಾ’ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧವಾಗುತ್ತಿದ್ದೇವೆ. ಗ್ರಾಹಕರ ಬದಲಾಗುತ್ತಿರುವ ಆಶೆಗಳೊಂದಿಗೆ ನಾವು ನಮ್ಮ ಕಾರು ಪೋರ್ಟ್ಫೋಲಿಯೊವನ್ನು ಹೆಚ್ಚು ವೈವಿಧ್ಯಮಯ ಮಾಡುತ್ತಿದ್ದೇವೆ” ಎಂದು ಕಿಯಾ ಇಂಡಿಯಾದ ಮಾರಾಟ ಮುಖ್ಯಸ್ಥ ಜುನ್ಸು ಚೋ ಹೇಳಿದ್ದಾರೆ.

2017ರ ಏಪ್ರಿಲ್‌ನಲ್ಲಿ ಆಂಧ್ರಪ್ರದೇಶದ ಅನಂತಪುರದಲ್ಲಿ ಕಾರು ತಯಾರಿ ಘಟಕ ಸ್ಥಾಪನೆಗಾಗಿ MOU ಸಹಿ ಮಾಡಿತ್ತು. 2019ರಲ್ಲಿ ಬೃಹತ್ ಉತ್ಪಾದನೆ ಆರಂಭವಾದ ನಂತರ, ವಾರ್ಷಿಕ 3 ಲಕ್ಷ ಕಾರುಗಳ ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. 2021ರಲ್ಲಿ “Movement That Inspires” ಎಂಬ ಹೊಸ ಬ್ರ್ಯಾಂಡ್ ಗುರುತನ್ನು ಅಳವಡಿಸಿಕೊಂಡಿದ್ದು, ಈ ಮೂಲಕ ನೂತನ ಕಾರುಗಳು ಮತ್ತು ಸೇವೆಗಳ ಮೂಲಕ ಗ್ರಾಹಕರ ಅನುಭವವನ್ನು ಹೊಸಮಟ್ಟಕ್ಕೆ ಕೊಂಡೊಯ್ಯಲು ಮುಂದಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page