Bengaluru: ಅನ್ನಭಾಗ್ಯ ಯೋಜನೆಯಡಿ (Annabhagya scheme) ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡುವದು ಕಮ್‌ಮುಷ್ಕಿಳಾಗಿದೆ. ಸರ್ಕಾರ ಲಾರಿ ಸಾಗಾಟ ವೆಚ್ಚವಾಗಿ 250 ಕೋಟಿ ರೂ. ಪಾವತಿಸದೆ ಉಳಿಸಿದ್ದರಿಂದ ಇಂದಿನಿಂದ ಆಹಾರ ಧಾನ್ಯ ಸಾಗಾಟ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಲಾರಿ ಮಾಲೀಕರ ಸಂಘವು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿತ್ತು. ಆದರೆ ಸರ್ಕಾರ ಸ್ಪಂದಿಸದೆ ಇದ್ದ ಕಾರಣ, ಲಾರಿಗಳು ಅನ್ನಭಾಗ್ಯ ಧಾನ್ಯ ಸಾಗಾಟವನ್ನು ನಿಲ್ಲಿಸಿದವು.
ಈ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, “ಸರ್ಕಾರವೇ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುತ್ತಿದೆ. ಇಂದಿರಾ ಕಿಟ್ ಹೆಸರಿನಲ್ಲಿ ಹಣ ಉಳಿಸಲು ಸರ್ಕಾರ ಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಸ್ತೆ ಬೇಕಾ? ಅಕ್ಕಿ ಬೇಕಾ?” ಎಂಬ Basavaraj Rayareddy ಅವರ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಗ್ಯಾರಂಟಿಯ ಜೊತೆಗೆ ಅಭಿವೃದ್ಧಿಯೂ ಆಗುತ್ತಿದೆ” ಎಂದರು.
ಸಚಿವ ಚಲುವರಾಯಸ್ವಾಮಿ, “ಗ್ಯಾರಂಟಿಯೂ ಆಗುತ್ತದೆ, ರಸ್ತೆಯೂ ಆಗುತ್ತದೆ” ಎಂದರೆ, ರಾಯರೆಡ್ಡಿ, “ನಾನು ತಮಾಷೆಯಾಗಿ ಮಾತನಾಡಿದ್ದೆ, ಅನುದಾನ ಕೊರತೆ ಇಲ್ಲ” ಎಂದು ತಮ್ಮ ಮಾತು ಸಮರ್ಥಿಸಿಕೊಂಡರು.
ಲಾರಿ ಸಾಗಾಟ ಬಾಕಿ ಹಣ ನೀಡದ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಲಕ್ಷಾಂತರ ಫಲಾನುಭವಿಗಳಿಗೆ ಮುಂದಿನ ತಿಂಗಳು ಅನ್ನಭಾಗ್ಯ ಅಕ್ಕಿ ಸಿಗದ ಅಪಾಯ ಎದುರಾಗಿದೆ.