
New Delhi: UPI ಬಳಕೆದಾರರಿಗೆ ಈಗಲಿಂದ ಸಿಹಿ ಸುದ್ದಿ. ಜುಲೈ 15ರಿಂದ (ಮಂಗಳವಾರ) ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಹೊಸ ಚಾರ್ಜ್ಬ್ಯಾಕ್ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮದ ಅಡಿಯಲ್ಲಿ, UPI ಮೂಲಕ ಹಣ ಕಳಿಸಿರುವಾಗ ವ್ಯವಹಾರ ವಿಫಲವಾದರೆ ಅಥವಾ ಹಣ ಕಡಿತವಾದರೂ ಎದುರಿಗೆ ತಲುಪದಿದ್ದರೆ, ಗ್ರಾಹಕರಿಗೆ ತ್ವರಿತ ಪರಿಹಾರ ಸಿಗಲಿದೆ.
ಹಳೆಯ ನಿಯಮದಂತೆ ಈ ವ್ಯಾಜ್ಯಗಳನ್ನು ಬಗೆಹರಿಸಲು ಐದು-ಆರು ದಿನಗಳು ಬೇಕಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಈಗಲಿಂದ ಒಂದು ಅಥವಾ ಹೆಚ್ಚುತ ಹೆಚ್ಚು ಎರಡು ದಿನಗಳೊಳಗೆ ಪರಿಹಾರ ನೀಡಬೇಕಾಗಿದೆ.
ಬ್ಯಾಂಕುಗಳು ಈಗ NPCIಗೆ ಪ್ರತ್ಯೇಕ ಮನವಿ ಸಲ್ಲಿಸಬೇಕಾಗಿಲ್ಲ. ಬದಲಿಗೆ, ನೇರವಾಗಿ ತಾವೇ ವ್ಯಾಜ್ಯವನ್ನು ಬಗೆಹರಿಸಬಹುದಾಗಿದೆ.
ಹಣ ತಲುಪದ ವ್ಯಕ್ತಿಗೆ ತಕ್ಷಣ ರೀಫಂಡ್ ಕೊಡಲು ಬ್ಯಾಂಕ್‌ಗಳಿಗೆ 1 ದಿನ, ವ್ಯಾಪಾರಿಗಳಿಗೆ ಮಾಡಿದ ಪಾವತಿ ವಿಫಲವಾದರೆ 2 ದಿನಗಳಲ್ಲಿ ಪರಿಹಾರ ನೀಡಬೇಕು ಎಂಬ ನಿರ್ದಿಷ್ಟ ಕಾಲಮಿತಿ ನಿಗದಿಯಾಗಿದೆ.
ಈ ಹೊಸ ನಿಯಮದಿಂದ ಯುಪಿಐ ಬಳಕೆದಾರರು ಮತ್ತು ಬ್ಯಾಂಕುಗಳಿಗೆ ಅನುಕೂಲವಾಗಲಿದ್ದು, ವ್ಯಾಜ್ಯ ಪರಿಹಾರ ಪ್ರಕ್ರಿಯೆ ಇನ್ನಷ್ಟು ವೇಗವಾಗಲಿದೆ.